alex Certify
ಕನ್ನಡ ದುನಿಯಾ       Mobile App
       

Kannada Duniya

30 ದಿನಬಳಕೆ ವಸ್ತುಗಳ ಬೆಲೆ ಇಳಿಕೆ: ಕಾರ್ ದುಬಾರಿ

ಹೈದರಾಬಾದ್: ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ 30 ಸರಕುಗಳ ತೆರಿಗೆ ಇಳಿಕೆ ಮಾಡಲು ತೀರ್ಮಾನಿಸಲಾಗಿದೆ.

ಹುಣಸೆಹಣ್ಣು, ಇಡ್ಲಿ –ದೋಸೆ ಹಿಟ್ಟು, ಅಗರಬತ್ತಿ, ರಬ್ಬರ್ ಬ್ಯಾಂಡ್, ಧೂಪ, ರೇನ್ ಕೋಟ್, ಗ್ಯಾಸ್ ಲೈಟರ್ ಮೊದಲಾದ 30 ದಿನಬಳಕೆ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ.

ದಿನಬಳಕೆ ವಸ್ತುಗಳ ಮೇಲಿನ ತೆರಿಗೆಯ ಲೋಪ ದೋಷ ಸರಿಪಡಿಸುವುದು ಸೇರಿದಂತೆ ಹಲವು ಉದ್ದೇಶದಿಂದ ಜಿ.ಎಸ್.ಟಿ. ಮಂಡಳಿ ಸಭೆ ನಡೆದಿದ್ದು, ಸಭೆಯಲ್ಲಿ ಖಾದಿ ಉತ್ಪನ್ನಗಳಿಗೆ ಜಿ.ಎಸ್.ಟಿ.ಯಿಂದ ವಿನಾಯಿತಿ ನೀಡಲಾಗಿದೆ.

ವಾರ್ಷಿಕ 20 ಲಕ್ಷ ರೂ.ಗಳಿಗಿಂತ ಕಡಿಮೆ ವಹಿವಾಟು ನಡೆಸುವ ಕರಕುಶಲ ಕರ್ಮಿಗಳು, ಜಾನಪದ ಕಲಾವಿದರು, ಆದಿವಾಸಿ ಕಲಾವಿದರಿಗೆ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ.

ಆದರೆ, ಲಕ್ಸುರಿ ಕಾರ್ ಗಳ ಮೇಲಿನ ತೆರಿಗೆ ಏರಿಕೆಯಾಗಿದ್ದು, ಸಣ್ಣ ಕಾರ್ ಗಳ ಸೆಸ್ ನಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ. ಸಣ್ಣ ಪೆಟ್ರೋಲ್, ಡೀಸೆಲ್ ಕಾರ್ ಗಳ ಮೇಲೆ ಹೆಚ್ಚುವರಿ ಮೇಲ್ತೆರಿಗೆ ಹಾಕಿಲ್ಲ. ಎಸ್.ಯು.ವಿ., ಮಧ್ಯಮ, ದೊಡ್ಡ ಗಾತ್ರದ ಕಾರ್ ಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...