alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ‘ಎಟಿಎಂ’ ಗಳ ಕುರಿತ ಶಾಕಿಂಗ್ ಸಂಗತಿ

ದೇಶದಲ್ಲಿನ ಶೇಕಡಾ 25 ರಷ್ಟು ಎಟಿಎಂ ಗಳ ವ್ಯವಸ್ಥೆ ದುರ್ಬಲಗೊಂಡಿದ್ದು ಕಳ್ಳಕಾಕರಿಗೆ, ವಂಚಕರಿಗೆ ಇದರಿಂದ ಹೆಚ್ಚು ಸಹಾಯವಾಗಲಿದೆ ಅನ್ನೋ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ. ಸಾರ್ವಜನಿಕ ಬ್ಯಾಕಿಂಗ್ ವಲಯದಲ್ಲಿ ಬಳಕೆಯಲ್ಲಿರುವ ಶೇಕಡಾ 25ರಷ್ಟು ಎಟಿಎಂ ಗಳಲ್ಲಿ ಹಳೆಯ ಸಾಫ್ಟ್ ವೇರ್ ಗಳನ್ನೇ ಬಳಕೆ ಮಾಡುತ್ತಿರುವ ಪರಿಣಾಮ ಗ್ರಾಹಕರು ತೊಂದರೆಗೆ ಒಳಗಾಗುವ, ಎಟಿಎಂ ವಂಚನೆಯ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಅನ್ನೋ ವಿಚಾರ ಬಯಲಾಗಿದೆ.

ಸಂಸತ್ ನಲ್ಲಿ ಕೂಡ ಈ ವಿಚಾರ ಪ್ರಸ್ತಾಪವಾಗಿದೆ. ಬಹಳಷ್ಟು ಎಟಿಎಂ ಗಳು ಹಳೆಯ ತಂತ್ರಜ್ಞಾನದ ಸಹಾಯದಿಂದಲೇ ಕೆಲಸ ಮಾಡುತ್ತಿದೆ. ಅವುಗಳನ್ನ ಅಪ್ಡೇಟ್ ಮಾಡುವ ಕಾರ್ಯ ನಡೆದಿಲ್ಲ. ಹಾಗಾಗಿ ಭದ್ರತಾ ಲೋಪ ಕಾಣಿಸಿಕೊಂಡು ಎಟಿಎಂ ಗಳಲ್ಲಿ ವಂಚನೆಯ ಪ್ರಕರಣಗಳು ಹೆಚ್ಚು ದಾಖಲಾಗ್ತಿವೆ. ರಾಜ್ಯ ಬ್ಯಾಂಕ್ ಗಳ ಎಟಿಎಂ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಇಂತಾ ಸಮಸ್ಯೆ ಹೆಚ್ಚಾಗಿದೆ ಅಂತ ಹೇಳಲಾಗ್ತಿದೆ.

ಈ ಸಂಬಂಧ ಸರ್ಕಾರ ಕೂಡ ಯಾವೆಲ್ಲಾ ಬ್ಯಾಂಕ್ ಗಳ ಎಟಿಎಂ ಗಳು ಹಳೆಯ ಸಾಫ್ಟ್ ವೇರ್ ಗಳಿಂದಲೇ ಕೆಲಸ ಮಾಡ್ತಿದೆ ಅನ್ನೋ ಪಟ್ಟಿಯನ್ನ ಬಿಡುಗಡೆ ಮಾಡೋಕೆ ಹಿಂದೇಟು ಹಾಕ್ತಿರೋದು ಆತಂಕ ಹೆಚ್ಚಾಗೋದಕ್ಕೆ ಕಾರಣವಾಗಿದೆ. 2017 ರ ಜುಲೈನಿಂದ 2018 ರ ಜೂನ್ ಅವಧಿಯಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆಗೆ ಸಂಬಂಧಿಸಿದಂತೆ 25,000 ದೂರುಗಳು ದಾಖಲಾಗಿವೆಯಂತೆ. ಇದರಿಂದಾಗಿ ಸುಮಾರು 861 ಕೋಟಿ ರೂಪಾಯಿ ವಂಚನೆ ನಡೆದಿದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...