alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಿತಪ್ಪಿಯೂ ಈ ಆಪ್ ‘ಡೌನ್ಲೋಡ್’ ಮಾಡಬೇಡಿ…!

ಕೆಲ ದಿನಗಳ ಹಿಂದೆ ರಿಲಾಯನ್ಸ್ ಜಿಯೋ ಕ್ರಿಪ್ಟೋ ಕರೆನ್ಸಿ ತರಲಿದೆ ಎಂಬ ಸುದ್ದಿಯಾಗಿತ್ತು. ಅದಾದ ನಂತ್ರ ಜಿಯೋ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೆಲ ನಕಲಿ ವೆಬ್ಸೈಟ್ ಗಳು ಹುಟ್ಟಿಕೊಂಡಿವೆ ಎಂಬ ಸುದ್ದಿಯಾಗಿತ್ತು. ಇದೆಲ್ಲ ಆದ್ಮೇಲೆ ಈಗ ಗೂಗಲ್ ಸ್ಟೋರ್ ನಲ್ಲಿ Jio Coinಗೆ ಸಂಬಂಧಿಸಿದ ಅನೇಕ ಆ್ಯಪ್ ಗಳು ಹುಟ್ಟಿಕೊಂಡಿವೆ.

ಈ ನಕಲಿ ಆ್ಯಪ್ ಗಳ ಸಂಖ್ಯೆ ಸುಮಾರು 22 ಎಂದು ಹೇಳಲಾಗ್ತಿದೆ. Jio Coin ಹೆಸರಿನ ಆ್ಯಪ್ ಗಳು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಲು ಸಿಗ್ತಿವೆ. Jio Coin, Jio Coin Buy, Jio Coin Crypto Currency ಹೀಗೆ 22 ನಕಲಿ ಆ್ಯಪ್ ಗಳು ಗ್ರಾಹಕರಿಗೆ ಸಿಗ್ತಿವೆ.

ಈ ಆ್ಯಪ್ ಗಳನ್ನು 1,000, 5,000, 10,000, 50,000 ಬಾರಿ ಡೌನ್ಲೋಡ್ ಮಾಡಲಾಗಿದೆ. ಈ ಆ್ಯಪ್ ಗಳು ಜಿಯೋ ಕ್ರಿಪ್ಟೋ ಕರೆನ್ಸಿ ಕೆಲಸ ಮಾಡುವುದಾಗಿ ಜಾಹೀರಾತು ನೀಡಿವೆ. 2018ರಲ್ಲಿ ಜಿಯೋ ಕ್ರಿಪ್ಟೋ ಕರೆನ್ಸಿ ಬರಲಿದೆ ಎಂದು ಅಂದಾಜಿಸಲಾಗಿದೆ. ಆದ್ರೆ ಈವರೆಗೂ ಜಿಯೋದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ ನಕಲಿ ಕಂಪನಿಗಳು ಮಾತ್ರ ಆ್ಯಪ್ ತಯಾರಿಸಿ ಜನರಿಂದ ಮಾಹಿತಿ ಪಡೆದು ಮೋಸ ಮಾಡ್ತಿವೆ. ಖಾಸಗಿ ಮಾಹಿತಿಗಳು ಈ ಆ್ಯಪ್ ಗಳಿಂದ ಸೋರಿಕೆಯಾಗ್ತಿದ್ದು, ಯಾವುದೇ ಕಾರಣಕ್ಕೆ ಇಂಥ ನಕಲಿ ಆ್ಯಪ್ ಡೌನ್ಲೋಡ್ ಮಾಡಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...