alex Certify
ಕನ್ನಡ ದುನಿಯಾ       Mobile App
       

Kannada Duniya

ಇವರು 2016 ರ ಸೋಶಿಯಲ್ ಮೀಡಿಯಾ ಸ್ಟಾರ್ಸ್….

2

2016 ರಲ್ಲಿ ಸೋಶಿಯಲ್ ಮೀಡಿಯಾ ಸಾಕಷ್ಟು ಆ್ಯಕ್ಟಿವ್ ಆಗಿತ್ತು. ಎಲ್ಲೋ ಇದ್ದವರೆಲ್ಲ ಇಂಟರ್ನೆಟ್ ಸ್ಟಾರ್ ಆದ್ರು. ಬಯಸದೇ ಬಂದ ಭಾಗ್ಯ ಹಲವರದ್ದಾಯ್ತು. ಕೆಲವರು ಯುಟ್ಯೂಬ್ ನಲ್ಲಿ ಹಿಟ್ ಆದ್ರೆ ಇನ್ನು ಕೆಲವರು ಟ್ವಿಟ್ಟರ್, ಇನ್ ಸ್ಟಾಗ್ರಾಮ್ ನಲ್ಲಿ ಫೇಮಸ್ ಆಗಿದ್ದಾರೆ. ಈ ವರ್ಷ ಸದ್ದಿಲ್ಲದೆ ಇಂಟರ್ನೆಟ್ ನಲ್ಲಿ ಸುದ್ದಿ ಮಾಡಿದವರು ಯಾರು ಅನ್ನೋದನ್ನು ನೋಡೋಣ.

ಯಾರೋ ಒಬ್ಬರು ಸಾಮಾಜಿಕ ತಾಣ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದರಿಂದ ಅರ್ಷದ್ ‘ಚಾಯ್ ವಾಲಾ’ ಖಾನ್ ಕನಸು ನನಸಾಗಿದೆ. ಚಹಾ ಮಾರಿ ಬದುಕು ಸಾಗಿಸುತ್ತಿದ್ದವನ ಜೀವನಕ್ಕೆ ಹೊಸ ತಿರುವು ಸಿಕ್ಕಿದೆ. ಒಂದು ಮಾಡೆಲಿಂಗ್ ಅಸೈನ್ಮೆಂಟ್ ಗಿಟ್ಟಿಸಿಕೊಂಡಿರೋ ಹ್ಯಾಂಡ್ ಸಮ್ ಚಾಯ್ ವಾಲಾ ಮ್ಯೂಸಿಕ್ ವಿಡಿಯೋ ಒಂದ್ರಲ್ಲಿ ಕೂಡ ಕಾಣಿಸಿಕೊಂಡಿದ್ದಾನೆ.

1

ನೇಪಾಳದ ಕಠ್ಮಂಡುವಿನಲ್ಲಿ ಕ್ಲಿಕ್ಕಿಸಿರುವ ತರಕಾರಿ ಮಾರೋ ಯುವತಿಯ ಫೋಟೋ ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಈ ತರಕಾರಿವಾಲಿ ನೋಡಿ ಇಂಟರ್ನೆಟ್ ನಲ್ಲಿ ಎಲ್ರೂ ಫಿದಾ ಆಗಿಬಿಟ್ಟಿದ್ರು.

3

ಚಾಂಗಿ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರೋ ಈ ಹ್ಯಾಂಡಸಮ್ ಹಂಕ್ ಕೂಡ ಎಲ್ಲರ ಮನಗೆದ್ದಿದ್ದಾನೆ. ಸಿಂಗಾಪುರಕ್ಕೆ ಬಂದಿಳಿಯೋ ಪ್ರವಾಸಿಗರೆಲ್ಲ ಸುಂದರ ಯುವಕ ಲೀ ಮಿನ್ವೀನನ್ನು ಕಣ್ಣರಳಿಸಿ ನೋಡ್ತಿದ್ದಾರೆ.

4

ಜಪಾನ್ ನ ಕಾಮಿಡಿಯನ್ ಕಜುಹಿತೋ ಕೋಸಕಾ ಕೂಡ ಈ ವರ್ಷ ಇಂಟರ್ನೆಟ್ ನಲ್ಲಿ ಫೇಮಸ್ ಆಗ್ಬಿಟ್ಟಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಪಿಕೋತರೋ ಅಂತಾನೇ ಕರೆಯುತ್ತಾರೆ. ಅವರ ‘ಪೆನ್-ಪೈನಾಪಲ್-ಆ್ಯಪಲ್-ಪೆನ್’ ಮ್ಯೂಸಿಕ್ ವಿಡಿಯೋ ಕೂಡ ಫೇಮಸ್ ಆಗಿದೆ.

5

ಬಾಂಗ್ಲಾದೇಶದ ಹೀರೋ ಅಲಂ ಕೂಡ ಸಾಮಾಜಿಕ ತಾಣದಿಂದ್ಲೇ ಸುದ್ದಿ ಮಾಡಿದ್ದಾನೆ. ಯುವತಿಯರ ಜೊತೆ ಈತನ ಸಖತ್ ಡ್ಯಾನ್ಸ್ ವೈರಲ್ ಆಗಿದೆ.

6

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವೇರಿದ್ದ ಸಂದರ್ಭದಲ್ಲಿ ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಡಿಬೇಟ್ ನಡೆಯುತ್ತಿತ್ತು. ಆಗ ಪರಿಸರ ನೀತಿ ಬಗ್ಗೆ ಸಮಯೋಚಿತ ಪ್ರಶ್ನೆಯೊಂದನ್ನು ಕೇಳುವ ಮೂಲಕ ಕೆನ್ ಬೋನ್ ಇಂಟರ್ನೆಟ್ ಸ್ಟಾರ್ ಆಗಿದ್ದರು.

7

ಇಸ್ಲಾಮೋಫೋಬಿಯಾ ಬಗ್ಗೆ ಎಲ್ಲೆಡೆ ಚರ್ಚೆ ನಡೀತಾ ಇದೆ. ಹಿಜಬ್ ನಿಷೇಧ, ಭಯೋತ್ಪಾದನೆ ಸೇರಿದಂತೆ ಬಹಳಷ್ಟು ವಿಷಯಗಳು ಪ್ರಚಲಿತದಲ್ಲಿವೆ. ಅದರ ನಡುವೆಯೇ ಸ್ಟೆಫಾನಿ ಕುರ್ಲೋ ಹಿಜಬ್ ಧರಿಸಿ ನರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ.

8

ತಾನ್ಯಾ ಚಮೋಲಿಯ ಅದ್ಭುತ ಕೊರಿಯೋಗ್ರಫಿ, ವೇಷಭೂಷಣ ಹಾಗೂ ಮುಂಬೈನ ಜುಹೂ ಬೀಚ್ ನಲ್ಲಿ ನಡೆದ ಡಾನ್ಸ್, ಇಂಟರ್ನೆಟ್ ಅನ್ನು ಅಲ್ಲಾಡಿಸಿಬಿಟ್ಟಿದೆ.

9

ಈ ವರ್ಷ ಮಕ್ಕಳು ಕೂಡ ಯುಟ್ಯೂಬ್ ನಲ್ಲಿ ಸ್ಟಾರ್ ಆಗಿದ್ದಾರೆ. 6 ವರ್ಷದ ಪೋರ ನಿಖಿಲ್ ರಾಜ್ ಅಡುಗೆ ಮಾಡೋದನ್ನು ನೋಡಿ ಎಲ್ರೂ ನಿಬ್ಬೆರಗಾಗಿದ್ದಾರೆ. ಎಲ್ಲೆನ್ ಡಿಜನರಸ್ ಶೋನಲ್ಲಿ ನಿಖಿಲ್ ಕೇರಳದ ಜನಪ್ರಿಯ ತಿನಿಸು ‘Puttu’ವನ್ನು ರುಚಿಕಟ್ಟಾಗಿ ಮಾಡಿ ಬಡಿಸಿದ್ದಾನೆ.

10

ಈ ವರ್ಷ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ ಮತ್ತೊಬ್ಳು ಪುಟಾಣಿ ಹೈದ್ರಾಬಾದ್ ನ 2 ವರ್ಷದ ಬಾಲೆ ರಿಮ್ಹಾಸ್. ಭೂಮಿ ಮೇಲಿರುವ ಎಲ್ಲ ದೇಶಗಳ ರಾಜಧಾನಿಯ ಹೆಸರು, ಭೂಮಿಯ ಚಲನೆಯ ವೇಗ ಎಲ್ಲವನ್ನೂ ಈಕೆ ಪಟಪಟನೆ ಹೇಳ್ತಾಳೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...