alex Certify
ಕನ್ನಡ ದುನಿಯಾ       Mobile App
       

Kannada Duniya

2016 ರಲ್ಲಿ ನಡೆದು ಹೋಯ್ತು ಅಪಾರ ಸಾವು-ನೋವು

rly-accident_20161121_350_630

ಒಂದು ವರ್ಷದಲ್ಲಿ 365 ದಿನಗಳಿರುತ್ವೆ. ಆದ್ರೆ ಈ ದಿನಗಳಲ್ಲಿ ನಡೆದ ಅನೇಕ ಘಟನೆಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪ್ರಕೃತಿ ಎಷ್ಟು ಸುಂದರವಾಗಿದೆಯೋ ಅಷ್ಟೇ ಕ್ರೂರವಾಗಿದೆ. ಅದು ಮುನಿಸಿಕೊಂಡಲ್ಲಿ ಮಾನವನ ನಾಶ ನಿಶ್ಚಿತ. 2016 ರಲ್ಲಿಯೂ ಪ್ರಕೃತಿ ವಿಕೋಪ, ಅಪಘಾತ ಸೇರಿದಂತೆ ಅನೇಕ ಘಟನೆಗಳು ನಡೆದಿವೆ.

ರೈಲು ಅಪಘಾತ : ನವೆಂಬರ್ 21,2016 –ಕಾನ್ಪುರದಲ್ಲಿ ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ ರೈಲು ದುರಂತ. 150 ಮಂದಿ ಸಾವು. 200 ಕ್ಕೂ ಹೆಚ್ಚು ಮಂದಿಗೆ ಗಾಯ.

ವರ್ಧಾ ಚಂಡಮಾರುತ : ಡಿಸೆಂಬರ್ 12, 2016 ಆಂಧ್ರಪ್ರದೇಶ, ತಮಿಳುನಾಡು ಕರಾವಳಿ ಪ್ರದೇಶದಲ್ಲಿ ವರ್ಧಾ ಚಂಡಮಾರುತ. ವರ್ಧಾ ಚಂಡಮಾರುತಕ್ಕೆ 20 ಜನರು ಬಲಿಯಾಗಿದ್ದರು. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿತ್ತು.

ಕೊಲಂ ಪಟಾಕಿ ದುರಂತ : ಏಪ್ರಿಲ್ 10,2016 ರಂದು ಕೇರಳದ ಕೊಲಂ ಜಿಲ್ಲೆಯ ಪಾರವೂರ್ ಮುಕಾಂಬಿಕಾ ದೇವಸ್ಥಾನದಲ್ಲಿ ಪಟಾಕಿ ಸಿಡಿದು 105 ಕ್ಕೂ ಹೆಚ್ಚು ಮಂದಿ ಸಾವು. 200 ಕ್ಕೂ ಹೆಚ್ಚು ಮಂದಿಗೆ ಗಾಯ.

ಭೂಕಂಪ : ಮ್ಯಾನ್ಮಾರ್-ಭಾರತ ಗಡಿಯಲ್ಲಿ ಭೂಕಂಪ. ಜನವರಿ 24,2016 ರಂದು ಸಂಭವಿಸಿದ ಭೂಕಂಪದಲ್ಲಿ 8 ಮಂದಿ ಸಾವು. 100ಕ್ಕೂ ಹೆಚ್ಚು ಮಂದಿಗೆ ಗಾಯ.

ಪೂರ್ವ ಮಾನ್ಸೂನ್ : ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿಯೇ ಈ ಬಾರಿ ಪೂರ್ವ ಮಾನ್ಸೂನ್ ಶುರುವಾಗಿತ್ತು. ಬ್ರಹ್ಮಪುತ್ರ ಹಾಗೂ ಅನೇಕ ಉಪನದಿಗಳ ಪ್ರವಾಹದಿಂದಾಗಿ 28 ಮಂದಿ ಬಲಿಯಾಗಿದ್ದಾರೆ. 11 ಮಿಲಿಯನ್ ಜನರು ತೊಂದರೆಗೀಡಾಗಿದ್ದರು.

ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ : ಮಾರ್ಚ್ 31,2016. ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕುಸಿತ. 27 ಮಂದಿ ಸಾವು. 80ಕ್ಕೂ ಹೆಚ್ಚು ಮಂದಿಗೆ ಗಾಯ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...