alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದ್ ಆಗಲಿದೆ 2 ಸಾವಿರ ರೂ. ನೋಟು..!

modi

2000 ಮುಖ ಬೆಲೆಯ ನೋಟುಗಳ ಮುದ್ರಣದ ವೇಳೆ ಭಾರೀ ವಿರೋಧ ವ್ಯಕ್ತವಾಗಿತ್ತು. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧಿಸುತ್ತಿದ್ದಂತೆ ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಆದ್ರೆ ಚಿಲ್ಲರೆ ಸಿಗಲ್ಲ ಎನ್ನುವ ಕಾರಣಕ್ಕೆ ಅನೇಕರು ಇದನ್ನು ವಿರೋಧಿಸಿದ್ದರು.

ಈ ಮಧ್ಯೆ ಚಿಲ್ಲರೆ ಸಮಸ್ಯೆ ತಪ್ಪಿಸಲು ಕೇಂದ್ರ ಸರ್ಕಾರ ಸದ್ಯದಲ್ಲಿಯೇ 2 ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೆ ತರ್ತಾ ಇದೆ. ಈಗಾಗ್ಲೇ ಮುದ್ರಣ ಶುರುವಾಗಿದೆ. ಮೂಲಗಳ ಪ್ರಕಾರ ಪ್ರೊಡಕ್ಷನ್ ಪ್ಲಾನಿಂಗ್ ಸಭೆ ಸದ್ಯ ನಡೆದಿದೆ. ಸಭೆಯಲ್ಲಿ ಹಣಕಾಸು ಸಚಿವಾಲಯ 2 ಸಾವಿರ ರೂಪಾಯಿ ನೋಟುಗಳ ಮುದ್ರಣಕ್ಕೆ ಒಪ್ಪಿಗೆ ನೀಡಿಲ್ಲ. ಚಿಲ್ಲರೆ ನೋಟುಗಳ ಮುದ್ರಣಕ್ಕೆ ಸಹಿ ಹಾಕಿದೆ.

ಸರ್ಕಾರ ಸಣ್ಣ ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಹೆಚ್ಚಿನ ಗಮನ ನೀಡ್ತಾ ಇದೆ. ಇದ್ರಿಂದ ಎರಡು ಲಾಭವಿದೆ. ನಕಲಿ ನೋಟುಗಳ ಮುದ್ರಣಕ್ಕೆ ತೆರೆ ಬೀಳಲಿದೆ. ಜೊತೆಗೆ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ. ಕೆಲ ದಿನಗಳಿಂದ ಎಟಿಎಂನಲ್ಲಿ 2 ಸಾವಿರ ರೂಪಾಯಿ ಕಡಿಮೆ ಪ್ರಮಾಣದಲ್ಲಿ ಸಿಗ್ತಿದೆ. ನಿಧಾನವಾಗಿ 2 ಸಾವಿರ ರೂಪಾಯಿಯನ್ನು ಮಾರುಕಟ್ಟೆಯಿಂದ ಮಾಯ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...