alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! 200, 2000 ರೂ. ನೋಟಿನ ಬಗ್ಗೆ ಇದು ತಿಳಿದಿರಲಿ

ನಿಮ್ಮ ಪರ್ಸ್ ನಲ್ಲೂ 200 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಆಮೇಲೆ ಪಶ್ಚಾತಾಪ ಪಡುವ ಬದಲು ಈಗ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಿ.

200 ರೂಪಾಯಿ ಹಾಗೂ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಸರ್ಕಾರ ಇತ್ತೀಚಿಗಷ್ಟೇ ಮಾರುಕಟ್ಟೆಗೆ ಬಿಟ್ಟಿದೆ. 2 ಸಾವಿರ ರೂಪಾಯಿ ನೋಟು ನವೆಂಬರ್ 8,2016 ಕ್ಕೆ ಬಿಡುಗಡೆಯಾದ್ರೆ 200 ರೂಪಾಯಿ ನೋಟು 2017 ಆಗಸ್ಟ್ ನಲ್ಲಿ ಬಿಡುಗಡೆಯಾಗಿದೆ.ಈಗ ಆರ್ ಬಿ ಐ ಈ ನೋಟಿನ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಆರ್ ಬಿ ಐ ಹೊಸ ಮಾಹಿತಿ ಪ್ರಕಾರ, 200 ಹಾಗೂ 2 ಸಾವಿರ ರೂಪಾಯಿ ನೋಟು ಕೊಳಕಾಗಿದ್ದರೆ ಅಥವಾ ನೋಟು ಹರಿದಿದ್ದರೆ ಯಾವುದೇ ಕಾರಣಕ್ಕೂ ಬ್ಯಾಂಕ್ ಗಳು ಈ ನೋಟುಗಳನ್ನು ವಾಪಸ್ ಪಡೆಯುವುದಿಲ್ಲ. ಹರಿದ ಹಾಗೂ ಕೊಳಕಾದ ನೋಟುಗಳ ವಿನಿಮಯದ ಬಗ್ಗೆ ಆರ್ ಬಿ ಐ ವಿತ್ತ ಸಚಿವಾಲಯಕ್ಕೆ ಪತ್ರ ಬರೆದಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

2 ಸಾವಿರ ರೂಪಾಯಿ ಮುಖ ಬೆಲೆಯ 6.70 ಲಕ್ಷ ನೋಟುಗಳು ಚಲಾವಣೆಯಲ್ಲಿವೆ. ಆರ್ ಬಿ ಐ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿದೆ. ಆರ್ ಬಿ ಐ ಹೊಸ ನಿಯಮದ ಪ್ರಕಾರ ಯಾವುದೇ ಬ್ಯಾಂಕ್ ಗಳು ಕೊಳಕಾದ ಹಾಗೂ ಹರಿದ ನೋಟುಗಳನ್ನು ಜಮಾ ಮಾಡುವುದಾಗ್ಲಿ, ವಿನಿಮಯ ಮಾಡುವುದಾಗ್ಲಿ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೊಳಕಾಗುವ ಹಾಗೂ ಹರಿದ ನೋಟುಗಳ ಸಂಖ್ಯೆ ಕಡಿಮೆ. ಹಾಗಂತ ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ ಎಂದು ಆರ್ ಬಿ ಐ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...