alex Certify
ಕನ್ನಡ ದುನಿಯಾ       Mobile App
       

Kannada Duniya

AC ಇಲ್ಲದ ಜಾಗದಲ್ಲಿ ತಿಂದರೂ ಕಟ್ಟಬೇಕು GST

gst-ac-df

ನವದೆಹಲಿ: ಹೋಟೆಲ್ ನಲ್ಲಿ ಹವಾನಿಯಂತ್ರಿತ ಸ್ಥಳದಲ್ಲಿ ಕುಳಿತು ತಿನ್ನದಿದ್ದರೂ ನಿಮಗೆ ಜಿ.ಎಸ್.ಟಿ. ಅನ್ವಯವಾಗುತ್ತೆ. ಹವಾನಿಯಂತ್ರಿತ ವ್ಯವಸ್ಥೆ(ಎ.ಸಿ.) ಇರುವ ಜಾಗದಿಂದ ಎ.ಸಿ. ಇಲ್ಲದ ಸ್ಥಳಕ್ಕೆ ಆಹಾರ ಪೂರೈಕೆ ಮಾಡಿದರೂ, ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಬೇಕಿದೆ.

ಹೊಸ ತೆರಿಗೆ ನೀತಿಯ ಪ್ರಕಾರ ಎ.ಸಿ. ವ್ಯವಸ್ಥೆ ಇರುವ ಹೋಟೆಲ್ ಗಳಿಗೆ ಶೇ. 18 ರಷ್ಟು ಜಿ.ಎಸ್.ಟಿ. ಹಾಗೂ ಎ.ಸಿ. ರಹಿತ ಹೋಟೆಲ್ ಗಳಲ್ಲಿ ಆಹಾರ ಪೂರೈಕೆಗೆ ಶೇ. 12 ರಷ್ಟು ಜಿ.ಎಸ್.ಟಿ. ಇದೆ.

ಫೈವ್ ಸ್ಟಾರ್ ಹೋಟೆಲ್ ಗಳಿಗೆ ಶೇ 28 ರಷ್ಟು ಜಿ.ಎಸ್.ಟಿ., ಲಿಕ್ಕರ್ ಲೈಸೆನ್ಸ್ ಹೊಂದಿರುವ ರೆಸ್ಟೊರೆಂಟ್ ಗಳಿಗೆ ಶೇ. 18 ರಷ್ಟು ಜಿ.ಎಸ್.ಟಿ. ಇದೆ.

ಇಂತಹ ಹೋಟೆಲ್ ಗಳಲ್ಲಿ ಎ.ಸಿ. ವ್ಯವಸ್ಥೆ ಇರುವ ಸ್ಥಳಗಳಿಂದ ಎ.ಸಿ. ಇಲ್ಲದ ಸ್ಥಳಗಳಿಗೆ ಆಹಾರ ಪೂರೈಕೆ ಮಾಡಿದರೂ ಶೇ. 18 ರಷ್ಟು ತೆರಿಗೆಯನ್ನು ಕಟ್ಟಬೇಕಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ಸ್(ಸಿ.ಬಿ.ಇ.ಸಿ.) ಸ್ಪಷ್ಟಪಡಿಸಿದೆ.

ಕೆಲವು ಕಡೆ ಎ.ಸಿ. ರಹಿತ ಮತ್ತು ಎ.ಸಿ ಸಹಿತ ವ್ಯವಸ್ಥೆಗಳು ಒಟ್ಟಿಗೆ ಇರುತ್ತವೆ. ಎ.ಸಿ. ರಹಿತವಾಗಿದ್ದರೂ, ಎ.ಸಿ. ಇರುವ ಸ್ಥಳದಿಂದ ಆಹಾರ ಸರಬರಾಜು ಮಾಡಿದಾಗ, ಜಿ.ಎಸ್.ಟಿ. ಅನ್ವಯವಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...