alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರ್ಚ್ 31 ರೊಳಗೆ ನೀವೂ ತಪ್ಪದೇ ಮಾಡಿ ಈ ಕೆಲಸ

ಕೇಂದ್ರ ಸರ್ಕಾರ ಗಡುವು ನಿಗದಿ ಮಾಡಿರೋ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೂ ಅಧಿಕ ಪ್ಯಾನ್ ಕಾರ್ಡ್ ಹಾಗೂ 87.79 ಕೋಟಿ ಬ್ಯಾಂಕ್ ಖಾತೆಗಳು ಈಗಾಗ್ಲೇ ಆಧಾರ್ ಗೆ ಲಿಂಕ್ ಆಗಿವೆ.

ಮಾರ್ಚ್ 5ರ ಅಂಕಿ- ಅಂಶದಂತೆ 16,65,82,421 ಪ್ಯಾನ್ ಕಾರ್ಡ್ ಗಳನ್ನು ಆಧಾರ್ ಗೆ ಲಿಂಕ್ ಮಾಡಲಾಗಿದೆ. ಮಾರ್ಚ್ 2ರ ಡೇಟಾ ಪ್ರಕಾರ 87.79 ಕೋಟಿ ಬ್ಯಾಂಕ್ ಖಾತೆಗಳಿಗೆ ಈಗಾಗ್ಲೇ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ ಅಂತಾ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ತಿಳಿಸಿದ್ದಾರೆ.

ವಿವಿಧ ಬ್ಯಾಂಕ್ ಗಳ ಶಾಖೆಗಳಲ್ಲಿ ಒಟ್ಟು 6811 ಆಧಾರ್ ಎನ್ ರೋಲ್ಮೆಂಟ್ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ. ಆಧಾರ್ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ ಅಂತಾ ಎಚ್ಚರಿಸಿದ್ದಾರೆ. ಮಾರ್ಚ್ 31ರೊಳಗೆ ಪ್ರತಿಯೊಬ್ಬರೂ ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...