alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಐಟಿ ದಾಳಿಯಲ್ಲಿ ಬರೋಬ್ಬರಿ 160 ಕೋಟಿ ರೂ. ನಗದು ಪತ್ತೆ

ಚೆನ್ನೈನ ರಸ್ತೆ ಗುತ್ತಿಗೆದಾರನ ಮನೆಯೊಂದರಲ್ಲಿ 160 ಕೋಟಿ ರೂ. ನಗದು ಹಾಗೂ 100 ಕೆಜಿ ಚಿನ್ನವನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ. ಈವರೆಗೆ ನಡೆಸಲಾದ ದಾಳಿಯಲ್ಲಿ ಅತ್ಯಂತ ದೊಡ್ಡ ಮೊತ್ತವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೆದ್ದಾರಿ ಹಾಗೂ ರಸ್ತೆಗಳ ನಿರ್ಮಾಣದಲ್ಲಿ ಸರ್ಕಾರದಿಂದ ಗುತ್ತಿಗೆ ಪಡೆಯುತ್ತಿದ್ದ ಸಂಸ್ಥೆ ಎಸ್‌ಪಿಕೆ ಆ್ಯಂಡ್‌ ಕಂಪನಿಗೆ ಸೇರಿದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 160 ಕೋಟಿ ರೂ. ನಗದು ಹಾಗೂ 100 ಕೆಜಿ ಚಿನ್ನದ ಗಟ್ಟಿ ಆದಾಯಕ್ಕೆ ಯಾವುದೇ ಲೆಕ್ಕ ಇಲ್ಲ ಎಂದು ತಿಳಿದು ಬಂದಿದೆ. ಸೋಮವಾರ ಆರಂಭವಾದ ದಾಳಿ ಇನ್ನೂ ಮುಂದುವರೆದಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ.

ಈವರೆಗೆ 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ನಡೆದ ದಾಳಿಯಲ್ಲಿ 110 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದು, ಅತ್ಯಂತ ದೊಡ್ಡ ಮೊತ್ತ ದಾಳಿ ಎಂದಾಗಿತ್ತು. ತೆರಿಗೆ ವಂಚನೆ ಸಂಬಂಧಿಸಿದಂತೆ ಕಂಪನಿ ವಿರುದ್ಧ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟಾರೆ ಕಂಪನಿಗೆ ಸೇರಿದ 22 ಜಾಗಗಳಲ್ಲಿ ದಾಳಿ ನಡೆಸಿದ್ದಾರೆ. ಈ ಪೈಕಿ 17 ಚೆನ್ನೈನಲ್ಲಿದ್ದರೆ, 4 ಅರುಪ್ಪುಕೊಟ್ಟಾಯ್‌, 1 ವೆಲ್ಲೂರಿನ ಕಟಪಾಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ಲಿಸಿದ್ದ ಕಾರುಗಳಲ್ಲಿ ಬ್ಯಾಗ್‌ ಇರಿಸಲಾಗಿತ್ತು. ಈ ಬ್ಯಾಗ್‌ಗಳ ತುಂಬ ಹಣ ಇತ್ತು. ಹಾಗೂ ಚಿನ್ನದ ಬಿಸ್ಕತ್‌ಗಳನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಒಂದು ದಿನ ಶೋಧ ಕಾರ್ಯ ಮುಂದುವರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...