alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಸ್ಮೋಸ್ ಸಹಕಾರಿ ಬ್ಯಾಂಕ್ ನ 94 ಕೋಟಿ ರೂ. ಹ್ಯಾಕ್…!

ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎ.ಟಿ.ಎಂ. ಸ್ವಿಚ್ ಸರ್ವರ್ ಹ್ಯಾಕ್ ಮಾಡಿರುವ ಚಾಲಾಕಿ ಕಳ್ಳನೋರ್ವ ಬರೋಬ್ಬರಿ 94 ಕೋಟಿ ರೂಪಾಯಿಯನ್ನು ದೋಚಿರುವ ಘಟನೆ ನಡೆದಿದೆ.

ಬ್ಯಾಂಕ್‌ನ ಹಲವು ಶಾಖೆಗಳಿಗೆ ಕಳ್ಳ, ತನ್ನ ಕೈಚಳಕ ತೋರಿಸಿದ್ದಾನೆ. ಭಾರತ ಹಾಗೂ ಹಾಂಕ್ ಕಾಂಗ್ ಮೂಲದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಒಂದೇ ಬ್ಯಾಂಕಿನ ಹಲವು ಶಾಖೆಗಳ ಎ.ಟಿ.ಎಂ.ನಲ್ಲಿ ಒಂದೇ ದಿನ ಮಧ್ಯಾಹ್ನ 3 ರಿಂದ ರಾತ್ರಿ 10ರ ಒಳಗೆ ಸುಮಾರು 15000 ಬಾರಿ ವಹಿವಾಟು ನಡೆಸಿದ್ದಾಗಿ ಗೊತ್ತಾಗಿದೆ.

ಹೈಟೆಕ್ ಕಳ್ಳ ಆಗಸ್ಟ್ 11 ರಂದು, ಬ್ಯಾಂಕ್ ನಿಂದ 78 ಕೋಟಿ ದೋಚಿದ್ದಾನೆ. ಈ ಹಣವನ್ನು ಆತ, ದೇಶದ ಹೊರಗೆ ವರ್ಗಾವಣೆ ಮಾಡಿದ್ದಾನೆ. ಇನ್ನು 2.5 ಕೋಟಿ ರೂಪಾಯಿಯನ್ನು ವೀಸಾ ಎನ್.ಸಿ.ಪಿ.ಐ. ಬಳಸಿ ಭಾರತದಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾನೆ. ಒಂದು ಬಾರಿ ರುಚಿ ಕಂಡ ಬೆಕ್ಕು ಹೇಗೆ ಸುಮ್ಮನೇ ಕುಳಿತುಕೊಳ್ಳುತ್ತದೆ ಹೇಳಿ. ಅದೇ ರೀತಿ ಹ್ಯಾಕರ್ ಎರಡು ದಿನ ಬಿಟ್ಟು 14 ಕೋಟಿ ಹಣ ಬಾಚಿಕೊಂಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪುಣೆ ಮೂಲದ ಕಾಸ್ಮೋಸ್ ಸಹಕಾರಿ ಬ್ಯಾಂಕ್ 2006ರ ಜನವರಿ 18ರಂದು ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...