alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾ ಕಂಪನಿಗಳ ಬಳಿಯಿದೆ ವಾರಸುದಾರರಿಲ್ಲದ 15,167 ಕೋಟಿ ಹಣ

ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ. ಇಂಡಿಯನ್ ಇನ್ಶುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಐಆರ್ಡಿಎಐ) ಈ ಬಗ್ಗೆ ಮಾಹಿತಿ ನೀಡಿದೆ. ವಿಮಾ ಕಂಪನಿಗಳಿಗೆ ಈ ಹಣ ಯಾರದ್ದು ಎಂದು ಪತ್ತೆ ಮಾಡಿ, ವಿಮಾದಾರರಿಗೆ ಅಥವಾ ವಾರಸುದಾರರಿಗೆ ಹಣ ನೀಡಿ ಎಂದು ಸೂಚನೆ ನೀಡಿದೆ.

ಪ್ರತಿಯೊಂದು ವಿಮಾ ಕಂಪನಿ ನಿರ್ದೇಶಕ ಮಟ್ಟದ ಸಮಿತಿ ಹೊಂದಿದ್ದು, ವಿಮಾದಾರರಿಗೆ ಬಾಕಿ ಹಣ ವಾಪಸ್ ನೀಡುವಂತೆ ನಿರ್ದೇಶಕ ಮಟ್ಟದ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ. ವಿಮೆ ಮಾಡಿ ಮರೆತಿರುವ ಅಥವಾ ವಿಮೆ ಮಾಡಿರುವ ಬಗ್ಗೆ ವಾರಸುದಾರರಿಗೆ ಗೊತ್ತಿಲ್ಲದ ಕಾರಣ ಕಂಪನಿ ಬಳಿಯೇ ಹಣವಿದೆ. ಆನ್ಲೈನ್ ನಲ್ಲಿ ಇಂಥವರ ಹೆಸರು ಹಾಗೂ ವಾರಸುದಾರರ ಹೆಸರು ಹಾಕಿ ಶೀಘ್ರವೇ ಹಣ ವಾಪಸ್ ನೀಡಿ ಎಂದು ಐಆರ್ಡಿಎಐ ಹೇಳಿದೆ.

ವಿಮಾ ಕಂಪನಿಗಳಲ್ಲಿರುವ 15,167 ಕೋಟಿಯಲ್ಲಿ ಲೈಫ್ ಇನ್ಶುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಬಳಿಯೇ 10,509 ಕೋಟಿ ರೂಪಾಯಿಯಿದೆ. ಖಾಸಗಿ ವಲಯದ ಉಳಿದ 22 ಕಂಪನಿಗಳ ಬಳಿ 4,657.45 ಕೋಟಿ ರೂಪಾಯಿಯಿದೆ.

ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಬಳಿ 807.4 ಕೋಟಿ ರೂಪಾಯಿ, ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶೂರೆನ್ಸ್ ಬಳಿ 696.12 ಕೋಟಿ, ಎಸ್ಬಿಐ ಲೈಫ್ ಇನ್ಶೂರೆನ್ಸ್ ಬಳಿ 678.59 ಕೋಟಿ ರೂಪಾಯಿ ಹಾಗೂ ಎಚ್ಡಿಎಫ್ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರೆನ್ಸ್ ಬಳಿ 659.3 ರೂಪಾಯಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...