alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು-ಕೊಚ್ಚಿ ನಡುವಿನ ವಿಮಾನಗಳು ರದ್ದು

ಕೇರಳದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಪ್ರತಿಕೂಲ ಹವಾಮಾನ ಹಿನ್ನಲೆಯಲ್ಲಿ ಬೆಂಗಳೂರು-ಕೊಚ್ಚಿ ನಡುವಿನ 15 ವಿಮಾನಗಳನ್ನು ರದ್ದುಪಡಿಸಲಾಗಿದೆ.

ಭಾರೀ ಮಳೆಯಿಂದಾಗಿ ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಾಹನ ಸಂಚಾರ, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿನ್ನೆಯಿಂದಲೇ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ವಿಮಾನಗಳ ಹಠಾತ್‌ ರದ್ದತಿಯಿಂದ ಕೊಚ್ಚಿನ್‌ಗೆ ಹೊರಟ ನೂರಾರು ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. 15 ವಿಮಾನಗಳ ಪೈಕಿ 6 ವಿಮಾನಗಳು ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳಾಗಿದ್ದು, ಉಳಿದ 9 ವಿಮಾನಗಳು ಬೆಂಗಳೂರಿನಿಂದ ಕೊಚ್ಚಿನ್‌ಗೆ ತೆರಳಬೇಕಾದ ವಿಮಾನಗಳಾಗಿವೆ. ಇದ್ದಕ್ಕಿದ್ದಂತೆ ವಿಮಾನ ಹಾರಾಟ ರದ್ದು ಮಾಡಿರುವುದು ಹಾಗೂ ಕೆಲ ವಿಮಾನಗಳ ಕಂಪನಿ ಪೂರ್ಣ ಹಣ ಮರು ಪಾವತಿ ಮಾಡದಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...