alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೂ ಕಾಲರ್ ಅಳವಡಿಸಿಕೊಂಡಿರುವವರು ಓದಲೇಬೇಕಾದ ಸುದ್ದಿ

ಟ್ರೂ ಕಾಲರ್ ಅನ್ನೋ ಅಪ್ಲಿಕೇಶನ್ ಬಗ್ಗೆ ಬಹುತೇಕರು ಕೇಳಿಯೇ ಇರ್ತೀರ. ಸಾಕಷ್ಟು ಪಾಪ್ಯುಲರ್ ಆಗಿರೋ ಈ ಆಪ್ ಸರಳವಾಗಿದ್ದು ಬಹುತೇಕ ಎಲ್ಲರ ಮೊಬೈಲ್ ನಲ್ಲೂ ಇದ್ದೇ ಇರುತ್ತೆ. ಕಾರಣ ಹೆಸರೇ ಸೂಚಿಸುವಂತೆ ಗೊತ್ತಿಲ್ಲದ ನಂಬರ್ ಗಳಿಂದ ಬಂದ ಕರೆಗಳನ್ನು ಯಾರು ಮಾಡಿದ್ದಾರೆಂದು ಗುರುತಿಸುತ್ತೆ.

ಕರೆಯನ್ನು ಯಾರು ಮಾಡಿರುವುದು ಹಾಗೂ ಎಲ್ಲಿಂದ ಮಾಡಿದ್ದಾರೆ ಅನ್ನೋ ಮಾಹಿತಿ ನೀಡುತ್ತೆ. ಆದರೆ ಟ್ರೂ ಕಾಲರ್ ಬಗ್ಗೆ ನಿಮಗೆ ಗೊತ್ತಿರಬೇಕಾದ ವಿಷಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೀವಿ.

ಟ್ರೂ ಕಾಲರ್ ನಲ್ಲಿ ನಿಮ್ಮ ಸ್ವಂತದ ಪ್ರೊಫೈಲ್ ಮಾಡಿಕೊಳ್ಳಬಹುದು. ನಿಮ್ಮ ಫೋಟೋ, ಅಡ್ರೆಸ್, ಇಮೇಲ್ ಐಡಿ ಅಥವಾ ವೆಬ್ ಸೈಟ್ ಗಳನ್ನು ಹಾಕಬಹುದು.

ನಿಮಗೆ ಇಷ್ಟವಿಲ್ಲದವರು ಅಥವಾ ಕಿರಿಕಿರಿ ಉಂಟು ಮಾಡುವ ನಂಬರ್ ನಿಂದ ಪದೇ ಪದೇ ಕರೆಗಳು ಬರುತ್ತಿದ್ದರೆ ಟ್ರೂ ಕಾಲರ್ ಮೂಲಕ ಅವರನ್ನು ಬ್ಲಾಕ್ ಮಾಡಬಹುದು.

ನಿಮ್ಮ ಪೋನ್ ನ ಇಂಟರ್ ನೆಟ್ ಡೇಟಾ ಬಳಸದೆಯೇ ಯಾರು ಕರೆ ಮಾಡುತ್ತಿದ್ದಾರೆಂಬುದನ್ನು ತಿಳಿದುಕೊಳ್ಳಬಹುದು.

ಟ್ರೂ ಕಾಲರ್ ಮೂಲಕ ನೀವು ವಿಡಿಯೋ ಕರೆಗಳನ್ನೂ ಮಾಡಬಹುದು. ಅಂದರೆ ಗೂಗಲ್ ವಿಡಿಯೋ ಕಾಲಿಂಗ್ ಅಪ್ಲಿಕೇಷನ್ ಮೂಲಕವೇ ಮಾಡಬೇಕಾಗುತ್ತೆ.
ಟ್ರೂ ಕಾಲರ್ ಅಪ್ಲಿಕೇಷನ್ ಅನ್ನು ಡಿಫಾಲ್ಟ್ ಡಯಲರ್ ಅನ್ನಾಗಿಯೂ ಬಳಸಬಹುದು.

ನಿಮಗೆ ಬರುವ ಮೆಸೇಜ್ ಗಳು ಗೊತ್ತಿಲ್ಲದ ನಂಬರ್ ಗಳಿಂದ ಬಂದಲ್ಲಿ ಅವುಗಳ ಬಗ್ಗೆಯೂ ನೀವು ಟ್ರೂ ಕಾಲರ್ ನಿಂದ ತಿಳಿದುಕೊಳ್ಳಬಹುದು.

ಟ್ರೂ ಕಾಲರ್ ಟೆಲಿಫೋನ್ ಡೈರೆಕ್ಟರಿಯಾಗಿಯೂ ಕೆಲಸ ಮಾಡುತ್ತದೆ. ನೀವು ವ್ಯಕ್ತಿಯ ಹೆಸರು ಅಥವಾ ಇಮೇಲ್ ಐಡಿ ಟೈಪ್ ಮಾಡಿ ಸರ್ಚ್ ಮಾಡಿದಲ್ಲಿ ಟ್ರೂ ಕಾಲರ್ ಲಿಸ್ಟ್ ನಲ್ಲಿರೋ ವ್ಯಕ್ತಿಗಳ ನಂಬರ್ ನಿಮಗೆ ಸಿಗುತ್ತೆ.

ಟ್ರೂ ಕಾಲರ್ ಡಾಟಾಬೇಸ್ ನಲ್ಲಿ ನಿಮ್ಮ ನಂಬರ್ ಇರೋದು ಬೇಡ ಅನ್ನಿಸಿದಲ್ಲಿ ನೀವು ಅದನ್ನು ಅನ್ ಲಿಸ್ಟ್ ಮಾಡಬಹುದು.

ಟ್ರೂ ಕಾಲರ್ ಅಪ್ಲಿಕೇಶನ್ ನಿಂದಾಗಿ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರು ಆನ್ ಲೈನ್ ನಲ್ಲಿರುವುದು ಹಾಗೂ ಅವರ ಲಾಸ್ಟ್ ಸೀನ್ ಕೂಡ ಕಾಣಬಹುದಾಗಿದೆ.

ನಿಮಗೆ ಬರುವ ಅನ್ನೌನ್ ಮೆಸೇಜ್ ಗಳಿಗಾಗಿ ನೀವು ಟ್ರೂ ಕಾಲರ್ ನಲ್ಲಿ ಸ್ಪಾರ್ಮ್ ಫೋಲ್ಡರ್ ಮಾಡಬಹುದು.

ಹೆಚ್.ಡಿ.ಎಫ್.ಸಿ., ಐಸಿಐಸಿಐ ಬ್ಯಾಂಕ್, ಮಹಿಂದ್ರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್ ಗಳಿಂದ ಟ್ರೂ ಕಾಲರ್ ಮೂಲಕ ಪೇಮೆಂಟ್ ಕೂಡ ಮಾಡಬಹುದು.

ಟ್ರೂ ಕಾಲರ್ ನಿಂದ ನೀವು ಫ್ಲಾಶ್ ಮೆಸೇಜ್ ಕೂಡ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...