alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಖುಷಿ ಸುದ್ದಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ. ಟಿಕೆಟ್ ಬುಕ್ಕಿಂಗ್ ಮಾಡಲು ಅತ್ಯುತ್ತಮ ಸೌಲಭ್ಯ ಒದಗಿಸಿದೆ. ಇನ್ಮುಂದೆ ಐ ಆರ್ ಸಿ ಟಿ ಸಿ ವೆಬ್ ಸೈಟ್ ಮೂಲಕ ಪ್ರಯಾಣಿಕರು ಒಂದು ತಿಂಗಳಲ್ಲಿ 6ಕ್ಕಿಂತ ಹೆಚ್ಚು ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಬಗ್ಗೆ ಐ ಆರ್ ಸಿ ಟಿ ಸಿ ಅಧಿಕೃತ ಹೇಳಿಕೆ ನೀಡಿದೆ.

ಪ್ರಯಾಣಿಕರು ತಿಂಗಳಿಗೆ 6ಕ್ಕಿಂತ ಹೆಚ್ಚು ಟಿಕೆಟ್ ಬುಕ್ ಮಾಡಬಹುದು. ಆದ್ರೆ ಐ ಆರ್ ಸಿ ಟಿ ಸಿ ವೆಬ್ಸೈಟ್ ಜೊತೆ ಆಧಾರ್ ಲಿಂಕ್ ಮಾಡಿರಬೇಕೆಂದು ಇಲಾಖೆ ಸ್ಪಷ್ಟಪಡಿಸಿದೆ. ಒಂದು ವೇಳೆ ಪ್ರಯಾಣಿಕರ ಆಧಾರ್ ನಂಬರ್ ಐ ಆರ್ ಸಿ ಟಿ ಸಿ ಜೊತೆ ಲಿಂಕ್ ಆಗಿದ್ದಲ್ಲಿ ಆ ಗ್ರಾಹಕ ತಿಂಗಳಿಗೆ 12 ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ.

ಒಂದು ವೇಳೆ ಪ್ರಯಾಣಿಕನ ಆಧಾರ್ ನಂಬರ್ ಐ ಆರ್ ಸಿ ಟಿ ಸಿ ಜೊತೆ ಲಿಂಕ್ ಆಗಿಲ್ಲವೆಂದಾದ್ರೆ ಹಿಂದಿನಂತೆಯೇ ಪ್ರಯಾಣಿಕ ತಿಂಗಳಿಗೆ ಕೇವಲ 6 ಟಿಕೆಟ್ ಬುಕ್ ಮಾಡಬಹುದಾಗಿದೆ. ಹಾಗೆ ಐ ಆರ್ ಸಿ ಟಿ ಸಿ ಜೊತೆ ಆಧಾರ್ ಲಿಂಕ್ ಮಾಡಬೇಕೆಂದು ಇಲಾಖೆ ಒತ್ತಡ ಹೇರುವುದಿಲ್ಲವೆಂದು ಐ ಆರ್ ಸಿ ಟಿ ಸಿ ಸ್ಪಷ್ಟನೆ ನೀಡಿದೆ.

ಐ ಆರ್ ಸಿ ಟಿ ಸಿ ಅಧಿಕೃತ ವೆಬ್ ಸೈಟ್ ಮುಖ್ಯ ಪುಟದಲ್ಲಿಯೇ ಆಧಾರ್ ಲಿಂಕ್ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲಿ ಸೂಚನೆ ನೀಡಿದಂತೆ ಆಧಾರ್ ನಂಬರ್ ಐ ಆರ್ ಸಿ ಟಿ ಸಿ ಗೆ ಲಿಂಕ್ ಮಾಡಿದಲ್ಲಿ ಪ್ರಯಾಣಿಕ ಒಂದು ತಿಂಗಳಲ್ಲಿ 12 ಟಿಕೆಟ್ ಖರೀದಿ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...