alex Certify
ಕನ್ನಡ ದುನಿಯಾ       Mobile App
       

Kannada Duniya

ಯಸ್….ಶೀಘ್ರದಲ್ಲಿ ಬರಲಿದೆ 100 ರೂ. ನಾಣ್ಯ

200 ರೂಪಾಯಿ ಹೊಸ ನೋಟು ಜಾರಿಗೆ ತಂದ ನಂತ್ರ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರ ಶೀಘ್ರದಲ್ಲಿಯೇ 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಇದ್ರ ಜೊತೆಗೆ 5 ರೂಪಾಯಿಯ ಹೊಸ ನಾಣ್ಯಗಳನ್ನೂ ಸರ್ಕಾರ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.

ಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಹಾಗೂ ಎಐಎಡಿಎಂಕೆ ಸಂಸ್ಥಾಪಕ ಡಾ.ಎಂ.ಜಿ. ರಾಮಚಂದ್ರನ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸರ್ಕಾರ ಈ ನಾಣ್ಯಗಳನ್ನು ಬಿಡುಗಡೆ ಮಾಡಲಿದೆ. 100 ರೂಪಾಯಿ ನಾಣ್ಯ 44 ಮಿಲಿಮೀಟರ್ ವ್ಯಾಸವಿದ್ದು,35 ಗ್ರಾಂ ತೂಕವಿರಲಿದೆ. ನಾಣ್ಯದ ಒಂದು ಭಾಗದಲ್ಲಿ ಅಶೋಕ ಸ್ತಂಭವಿರಲಿದ್ದು, ಅದ್ರ ಕೆಳಗೆ ಸತ್ಯ ಮೇವ ಜಯತೇ ಎಂದು ಬರೆದಿರಲಿದೆ.

ಅಶೋಕ ಸ್ತಂಭದ ಒಂದು ಕಡೆ ಭಾರತ ಹಾಗೂ ಇನ್ನೊಂದು ಕಡೆ ಇಂಡಿಯಾ ಎಂದು ಬರೆದಿರಲಿದೆ. ಬೆಳ್ಳಿ, ತಾಮ್ರ, ನಿಕೆಲ್ ಮತ್ತು ಸತುವಿನಿಂದ 100 ರೂಪಾಯಿ ನಾಣ್ಯವನ್ನು ತಯಾರಿಸಲಾಗಿದೆ. ಒಂದು ನಾಣ್ಯದ ಹಿಂಭಾಗದಲ್ಲಿ ಸುಬ್ಬಲಕ್ಷ್ಮಿ ಹಾಗೂ ಇನ್ನೊಂದು ನಾಣ್ಯದ ಹಿಂಭಾಗದಲ್ಲಿ ಡಾ.ಎಂ.ಜಿ. ರಾಮಚಂದ್ರನ್ ಆಕೃತಿ ಮುದ್ರಣವಾಗಲಿದೆ. ಇನ್ನು 5 ರೂಪಾಯಿ ಹೊಸ ನಾಣ್ಯ 23 ಮಿಲಿಮೀಟರ್ ವ್ಯಾಸವಿರಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...