alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನೆಯನ್ನು ಸ್ಮಾರ್ಟ್ ಆಗಿಸಲು ಇಲ್ಲಿವೆ ಅಗ್ಗದ ಸಾಧನಗಳು

ಇಂದು ನಮಗೆ ಎಲ್ಲಾ ಕೆಲಸಕ್ಕೂ ಗ್ಯಾಜೆಟ್‌ಗಳೇ ಬೇಕು. ಅಷ್ಟರಮಟ್ಟಿಗೆ ನಾವು ಟೆಕ್ ಸೇವಿ ಆಗಿಬಿಟ್ಟಿದ್ದೇವೆ. ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲ, ನಮ್ಮ ಬದುಕನ್ನು ಸ್ಮಾರ್ಟ್ ಆಗಿಸಲು ನೂರಾರು ಸ್ಮಾರ್ಟ್ ಡಿವೈಸ್‌ಗಳು ಮಾರುಕಟ್ಟೆಯಲ್ಲಿವೆ.

ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ದುಬಾರಿಯೇನಲ್ಲ, ಅಗ್ಗದ, 2,000 ರೂ.ಗಿಂತ ಒಳಗಿನ ಸಾಕಷ್ಟು ಗೃಹೋಪಯೋಗಿ ಸಾಧನಗಳು ಲಭ್ಯ ಇವೆ. ಅವುಗಳ ಮೇಲೊಂದು ಝಲಕ್ ಇಲ್ಲಿದೆ.

ಕ್ಯಾಕಝಿ ಎಲ್‌ಇಡಿ ಸ್ಮಾರ್ಟ್ ಡೋರ್‌ಬೆಲ್ 1,503.99 ರೂ.ಗೆ ಲಭ್ಯ ಇದೆ. ಈ ಡೋರ್‌ಬೆಲ್ ವಾಟರ್‌ಪ್ರೂಫ್ ಹಾಗೂ ಹಗುರವೂ ಆಗಿದೆ. 300 ಮೀ. ದೂರದ ವ್ಯಾಪ್ತಿಯನ್ನು ಇದು ಹೊಂದಿದ್ದು, ವಾಲ್ಯೂಮ್ ಅನ್ನು ನಿಯಂತ್ರಿಸಲು ಬಟನ್‌ ಇವೆ. ಸಾಂಪ್ರದಾಯಿಕ ಡೋರ್‌ಬೆಲ್‌ಗಳಂತೆ ವೈರ್‌ಗಳು ಇದಕ್ಕಿಲ್ಲ. ಸಾಕೆಟ್‌ಗೆ ಪ್ಲಗ್ ಮಾಡಿದರಾಯಿತು.

ಸೊನೊಫ್ ಸ್ಮಾರ್ಟ್ ವೈಫೈ ಸ್ವಿಚ್ 498 ರೂ.ಗೆ ಲಭ್ಯ ಇದೆ. ಈ ಸ್ವಿಚ್ ಅನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಆಪ್‌ನಿಂದ ಆನ್ /ಆಫ್ ಮಾಡಬಹುದು, ಜತೆಗೆ ಆನ್, ಆಫ್ ಮಾಡಲು ಸಮಯವನ್ನೂ ನಿಗದಿಪಡಿಸಬಹುದು.

ಎನೀಕ್ಯಾಸ್ಟ್ ವೈರ್‌ಲೆಸ್ ಸ್ಮಾರ್ಟ್ ಸ್ಟ್ರೀಮಿಂಗ್ ಡಿವೈಸ್‌ಗಳು 999 ರೂ.ಗೆ ಲಭ್ಯ ಇವೆ. ನೀವು ಆಪಲ್ ಏರ್‌ಪ್ಲೇ, ಮಿರಾಕ್ಯಾಸ್ಟ್, ಡಿಎಲ್‌ಎನ್ಎ ಮೂಲಕ ಕಂಟೆಂಟ್ ಅನ್ನು ನೋಡಲು ಈ ಡಾಂಗಲ್ ಅನ್ನು ಉಪಯೋಗಿಸಬಹುದು. ನಿಮ್ಮ ಸ್ಮಾರ್ಟ್ ಡಿವೈಸ್‌ನ ಸ್ಕ್ರೀನ್‌ ಅನ್ನು ಟಿವಿಯಂತೆ ದೊಡ್ಡ ಸ್ಕ್ರೀನ್ ಮೇಲೆ ತೋರಿಸಬಲ್ಲುದು.

ಗ್ಲೋಬಲ್ ಟೆಕ್ ವೈ-ಫೈ ಎನೇಬಲ್ ಆಗಿರುವ ಎಲ್‌ಇಡಿ ಸ್ಟ್ರಿಪ್ 1,330 ರೂ.ಗೆ ಸಿಗುತ್ತದೆ. ಸಿಸ್ಕಾ ಸ್ಮಾರ್ಟ್ ಬಲ್ಬ್ 1,706 ರೂ.ಗೆ, ಫಿಲಿಪ್ಸ್ ಹ್ಯೂ ಸ್ಮಾರ್ಟ್ ಬಲ್ಬ್ 1,915 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯ ಇದೆ.

ಯೂಫೈ ಜೀನಿ ಸ್ಮಾರ್ಟ್ ಸ್ಪೀಕರ್ 2,000 ರೂ.ಗೆ, ಫಿನೋವೋ ಮೋಶನ್ ಸೆನ್ಸರ್ ಲ್ಯಾಂಪ್ 520 ರೂ.ಗೆ, ಕ್ಸಿಯೋಮಿ ವೈ-ಫೈ ಪವರ್ ಸ್ಟ್ರಿಪ್ 1,794 ರೂ.ಗೆ., ಐಬಿಎಸ್ ವೈ-ಫೈ ಕ್ಯಾಮರಾ 1,999 ರೂ.ಗೆ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...