alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆದ ವಾಹನದಲ್ಲಿ ಸಾಗಿಸಿದ್ರು ಕೋಟಿ ಕೋಟಿ ಹಣ…!

ದೇಶದ ಅತಿದೊಡ್ಡ ಬ್ಯಾಂಕ್ ಎಸ್ ಬಿ ಐ ನಿಂದ ಭಾರಿ ಭದ್ರತಾ ಲೋಪ ನಡೆದಿದೆ. ತೆರೆದ ವಾಹನದಲ್ಲಿ ಸರಿಯಾದ ಭದ್ರತೆ ಇಲ್ಲದೆ 40 ಕೋಟಿ ರೂಪಾಯಿ ಹಣವನ್ನು ಪ್ರಾಯೋಜಿತ ಬ್ಯಾಂಕ್ ಗೆ ಸಾಗಿಸಿದ ಘಟನೆ ತೆಲಂಗಾಣದ ನಲಗೊಂಡಾದಲ್ಲಿ ನಡೆದಿದೆ.

ಕವರ್ ಗಳಲ್ಲಿ ಪ್ಯಾಕ್ ಮಾಡದೆ 40 ಕೋಟಿ ಮೌಲ್ಯದ ಹೊಸ ನೋಟುಗಳನ್ನು ತೆರೆದ ವಾಹನದಲ್ಲಿ ಲೋಡ್ ಮಾಡಿ, ಒಂದು ಕಿಲೋಮೀಟರ್ ಅಂತರದಲ್ಲಿರುವ ಆಂಧ್ರಪ್ರದೇಶದ ಗ್ರಾಮೀಣ ವಿಕಾಸ ಬ್ಯಾಂಕ್ ಗೆ ಸಾಗಿಸಲಾಗಿದೆ. ಇಷ್ಟೊಂದು ಹಣ ತರಲು ಶಸ್ತ್ರಸಜ್ಜಿತ ಪೊಲೀಸ್ ಬೆಂಗಾವಲು ಪಡೆಯ ಮೂವರು ಪೇದೆಗಳನ್ನು ಮಾತ್ರ ನಿಯೋಜಿಸಲಾಗಿತ್ತು.

ರೈತಬಂಧು ಯೋಜನೆಗೆ ಎಸ್ ಬಿ ಐ ನಿಂದ ನಗರದ ಐದು ಬ್ಯಾಂಕ್ ಗಳಿಗೆ ಈ ಹಣ ಹಂಚಬೇಕಿತ್ತು. ಹೀಗಾಗಿ ತೆರೆದ ವಾಹನದಲ್ಲಿಯೇ ವಿವಿಧ ಬ್ಯಾಂಕ್ ಗಳಿಗೆ ಹಣ ತೆಗೆದುಕೊಂಡು ಹೋಗಲಾಗಿದೆ. ಈ ಬಗ್ಗೆ ನಲಗೊಂಡಾ ಸರ್ಕಲ್ ಇನ್ಸ್ ಪೆಕ್ಟರ್ ಪ್ರತಿಕ್ರಿಯಿಸಿದ್ದು, ಇಷ್ಟೊಂದು ಹಣ ಸಾಗಿಸಲು ಕೇವಲ ಮೂರು ಮಂದಿ ಶಸ್ತ್ರಸಜ್ಜಿತ ಪೊಲೀಸರಿದ್ದರೆ ಸಾಲದು. ಇದು ಬ್ಯಾಂಕ್ ನ ಭದ್ರತಾ ಲೋಪ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ವಿವರಣಾ ಪತ್ರ ನೀಡುವಂತೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...