alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ನೀಡ್ತಾ ಇದೆ ಭರ್ಜರಿ ಆಫರ್

BSNL 3342ರಿಲಾಯನ್ಸ್ ಜಿಯೋ ಭಾರೀ ಆಫರ್ ನೀಡುವ ಮೂಲಕ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಇತರೆ ಟೆಲಿಕಾಂ ಕಂಪನಿಗಳು ಅದಕ್ಕೆ ಸ್ಪರ್ಧೆಯೊಡ್ಡಲು ತಯಾರಿ ನಡೆಸುತ್ತಿವೆ.

ಗ್ರಾಹಕರು ಪೋರ್ಟಿಂಗ್ ಮೂಲಕ ರಿಲಾಯನ್ಸ್ ಜಿಯೋ ಗೆ ತೆರಳದಂತೆ ಮಾಡಲು ಕಸರತ್ತು ಮಾಡುತ್ತಿರುವ ಕಂಪನಿಗಳು, ಅಂತಹ ಗ್ರಾಹಕರಿಗೆ ರಿಯಾಯಿತಿ ದರ ನೀಡುವ ಮೂಲಕ ಮನವೊಲಿಸಲು ಯತ್ನಿಸುತ್ತಿವೆ.

ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಭಾರೀ ಆಫರ್ ಘೋಷಿಸಿದ್ದು, ಕೇವಲ 249 ರೂಪಾಯಿಗಳಿಗೆ ಅನಿಯಮಿತ ಡೇಟಾ ಸೌಲಭ್ಯ ನೀಡುವುದಾಗಿ ಹೇಳಿದೆ. ‘Experience Unlimited BB 249’ ಹೆಸರಿನ ಈ ಪ್ಲಾನ್ ಸೆಪ್ಟೆಂಬರ್ 9 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಮಾಸಿಕ 300 ಜಿಬಿ ವರೆಗೆ ಡೇಟಾ ಬಳಸುವ ಗ್ರಾಹಕರಿಗೆ ಈ ಕೊಡುಗೆಯಿಂದಾಗಿ ಪ್ರತಿ ಜಿಬಿ ಗೆ 1 ರೂ.ಗಳಿಗಿಂತಲೂ ಕಡಿಮೆ ವೆಚ್ಚ ತಗುಲಲಿದೆ. 2 ಎಂಬಿಪಿಎಸ್ ವೇಗದಲ್ಲಿ ಡೇಟಾ ದೊರೆಯಲಿದೆ ಎನ್ನಲಾಗಿದ್ದು, ಮೊಬೈಲ್ ಬಳಕೆದಾರರ ಕರೆ ದರಗಳಲ್ಲೂ ಬಿಎಸ್ಎನ್ಎಲ್ ಕಡಿತಗೊಳಿಸುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...