alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ ಆನ್ ಡಿಲೆವರಿ ಬಗ್ಗೆ ದೊಡ್ಡ ಬಾಂಬ್ ಸಿಡಿಸಿದ ಆರ್ಬಿಐ

ಇ-ಕಾಮರ್ಸ್ ಕಂಪನಿಗಳ ಬಹುಮುಖ್ಯ ಪಾವತಿ ಆಯ್ಕೆ ಕ್ಯಾಶ್ ಆನ್ ಡಿಲೆವರಿ. ಅರ್ಧಕ್ಕಿಂತಲೂ ಹೆಚ್ಚು ವ್ಯವಹಾರ ಇದ್ರಲ್ಲಿಯೇ ನಡೆಯುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡ ಹೇಳಿಕೆಯೊಂದನ್ನು ನೀಡಿದೆ. ಆರ್ ಬಿಐ ಈ ಹೇಳಿಕೆ ಇ-ಕಾಮರ್ಸ್ ವ್ಯವಹಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ಆರ್ ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಆರ್ಬಿಐ, ಇ-ಕಾಮರ್ಸ್ ಕಂಪನಿಗಳ ಬಹುಮುಖ್ಯ ಪಾವತಿ ಆಯ್ಕೆ ಕ್ಯಾಶ್ ಆನ್ ಡಿಲೆವರಿ ಕಾನೂನು ಬಾಹಿರ ಎಂದಿದೆ. ಆರ್ ಬಿಐ ಪ್ರಕಾರ ಕ್ಯಾಶ್ ಆನ್ ಡಿಲೆವರಿ ಗ್ಯುಲೇಟರಿ ಗ್ರೇ ಏರಿಯಾ ಆಗಿರುತ್ತದೆ. ಅಮೆಜಾನ್-ಫ್ಲಿಪ್ಕಾರ್ಟ್ ನಂತಹ ಪೇಮೆಂಟ್ ಇಂಟರ್ಮೀಡಿಯಟ್ ಪೇಮೆಂಟ್ಸ್ ಎಂಡ್ ಸೆಟ್ಲ್ಮೆಂಟ್ಸ್ ಸಿಸ್ಟಂ ಆಕ್ಟ್ 2007 ರ ಅಡಿಯಲ್ಲಿ ಅಧಿಕೃತಲ್ಲವೆಂದು ಆರ್ ಬಿಐ ಹೇಳಿದೆ. ಈ ಆಕ್ಟ್ ನಲ್ಲಿ ಆನ್ಲೈನ್ ಹಾಗೂ ಎಲೆಕ್ಟ್ರಾನಿಕ್ ಪೇಮೆಂಟ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಕ್ಯಾಶ್ ಆನ್ ಡಿಲೆವರಿಗೆ ಒಪ್ಪಿಗೆ ನೀಡಲಾಗಿಲ್ಲ.

ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಇ-ಕಾಮರ್ಸ್ ಕಂಪನಿಗಳಲ್ಲಿ ಈಗ ಕ್ಯಾಶ್ ಆನ್ ಡಿಲೆವರಿ ಸಾಮಾನ್ಯವಾಗಿದೆ. ಅರ್ಧದಷ್ಟು ವ್ಯವಹಾರ ಇದ್ರಲ್ಲಿಯೇ ನಡೆಯುತ್ತದೆ. 2010 ರಲ್ಲಿ ಫ್ಲಿಪ್ಕಾರ್ಟ್ ಮೊದಲ ಬಾರಿ ಕ್ಯಾಶ್ ಆನ್ ಡಿಲೆವರಿ ವ್ಯವಸ್ಥೆ ಜಾರಿಗೆ ತಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...