alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಗುಡ್ ನ್ಯೂಸ್

ದೇಶದ ದೊಡ್ಡ ಸರ್ಕಾರಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಡೆಬಿಟ್ ಕಾರ್ಡ್ ಬಳಸುವಾಗ ಇರ್ತಿದ್ದ ಭಯ ಇನ್ಮುಂದೆ ಇರೋದಿಲ್ಲ. ಎಸ್ ಬಿ ಐ ಗ್ರಾಹಕರು ಕಂಟ್ರೋಲ್ ಮಾಡುವಂತಹ ಎಟಿಎಂ ಕಾರ್ಡ್ ಜಾರಿಗೆ ತಂದಿದೆ.

ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಎಟಿಎಂ ನೀಡ್ತಿದೆ. ಗ್ರಾಹಕರಿಗೆ ಇದ್ರ ಸೌಲಭ್ಯ ಎಸ್ ಬಿ ಐ ಕ್ವಿಕ್ ಆ್ಯಪ್ ಮೂಲಕ ಸಿಗಲಿದೆ. ಸಿಬಿಐ ಕ್ವಿಕ್ ಆ್ಯಪ್ ನಲ್ಲಿ ಎಟಿಎಂಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಎಟಿಎಂ ಬಳಕೆದಾರರು ಎಟಿಎಂ ಕಾರ್ಡ್ ಬ್ಲಾಕ್ ಮಾಡುವುದ್ರಿಂದ ಹಿಡಿದು ಪಿನ್ ಬದಲಾವಣೆ ಸೇರಿದಂತೆ ಎಟಿಎಂ ಆನ್ ಆಫ್ ಕೂಡ ಮಾಡಬಹುದು.

ಎಸ್ ಬಿ ಐ ನ ಹೊಸ ಎಟಿಎಂ ಕಾರ್ಡನ್ನು ಗ್ರಾಹಕರು ಎಸ್ ಬಿ ಐ ಕ್ವಿಕ್ ಆ್ಯಪ್ ಮೂಲಕ ಸ್ಮಾರ್ಟ್ಫೋನ್ ನಲ್ಲಿಯೇ ಕಾರ್ಡ್ ಸುರಕ್ಷತೆ ಬಗ್ಗೆ ಗಮನ ನೀಡಬಹುದು. ಎಸ್ ಬಿ ಐ ಗೆ ನೀಡಿದ ಮೊಬೈಲ್ ನಂಬರ್ ಇರುವ ಮೊಬೈಲ್ ನಲ್ಲಿ ಎಸ್ ಬಿ ಐ ಕ್ವಿಕ್ ಆ್ಯಪ್ ಡೌನ್ಲೋಡ್ ಮಾಡಿದಾಗ ಮಾತ್ರ ಈ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

ಎಟಿಎಂ ಕಳೆದು ಹೋದಾಗ ಈ ಆ್ಯಪ್ ಮೂಲಕ ಗ್ರಾಹಕರು ಡೆಬಿಟ್ ಕಾರ್ಡನ್ನು ಬ್ಲಾಕ್ ಮಾಡಬಹುದು. ಹಾಗೆ ಎಟಿಎಂ ಕಾರ್ಡನ್ನು ಶಾಶ್ವತವಾಗಿ ಬಂದ್ ಮಾಡಬಯಸುವ ಗ್ರಾಹಕರು ಕೂಡ ಆ್ಯಪ್ ಮೂಲಕವೇ ಕಾರ್ಡ್ ಸೇವೆಯನ್ನು ಬಂದ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...