alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗಳಲ್ಲೇ ದುರ್ಬಳಕೆಯಾಗ್ತಿದೆ ನಿಮ್ಮ ಗುರುತಿನ ಚೀಟಿ..!

id

ಹೊಸ ನೋಟು ವಿತ್ ಡ್ರಾ ಮಾಡಿಕೊಳ್ಳಲು ಈಗಾಗ್ಲೇ ಯಾರೋ ನಿಮ್ಮ ಗುರುತಿನ ಚೀಟಿಯನ್ನು ಬಳಸಿದ್ದಾರೆ ಅಂತೇನಾದ್ರೂ ಬ್ಯಾಂಕ್ ನವರು ಹೇಳಿದ್ರೆ ನಿಮ್ ಐಡಿ ದುರ್ಬಳಕೆಯಾಗಿದೆ ಅಂತಾನೇ ಅರ್ಥ.

ಕೆಲ ಕಂಪನಿಗಳು ತಮ್ಮ ನೌಕರರ ಐಡಿ ಕಾರ್ಡ್ ಗಳನ್ನು ಗುಟ್ಟಾಗಿ ಬ್ಯಾಂಕ್ ಗಳಿಗೆ ನೀಡಿ ಲಕ್ಷಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ಬದಲಾಯಿಸಿಕೊಳ್ತಿವೆ. ಬ್ಯಾಂಕ್ ಸಿಬ್ಬಂದಿ ಪ್ರತಿ ಐಡಿಗೆ 4000 ರೂಪಾಯಿಯಂತೆ ಪ್ರತಿ ದಿನ ಹಣ ಬದಲಾಯಿಸಿಕೊಡ್ತಿವೆ. ಹೀಗೆ ವಾಮಮಾರ್ಗದಲ್ಲಿ ಪ್ರತಿ ನಿತ್ಯ ಅಪಾರ ಕಪ್ಪುಹಣವನ್ನು ವೈಟ್ ಮಾಡಲಾಗ್ತಿದೆ.

ಕೆಲವು ಸಂಸ್ಥೆಗಳು ಈ ಕೆಲಸಕ್ಕಾಗಿ ಏಜೆಂಟ್ ಗಳನ್ನೇ ನೇಮಕ ಮಾಡಿಕೊಂಡಿವೆ. ಅವರು ಟೆಲಿಕಾಂ ಕಂಪನಿಗಳು ಮತ್ತು ಮೊಬೈಲ್ ಅಂಗಡಿಗಳಿಂದ ಗ್ರಾಹಕರ ಐಡಿಯ ಫೋಟೋಕಾಪಿಯನ್ನು ಹಣಕೊಟ್ಟು ಖರೀದಿಸ್ತಿದ್ದಾರೆ. ಅದನ್ನು ಬ್ಯಾಂಕ್ ಗೆ ಕೊಟ್ಟು ಕಪ್ಪು ಹಣ ಬದಲಾಯಿಸಿಕೊಳ್ಳುವ ದಂಧೆಯೇ ನಡೀತಿದೆ.

ಇನ್ನು ಕೆಲವು ಬ್ಯಾಂಕ್ ಗಳು ಗ್ರಾಹಕರು ತಮ್ಮ ಖಾತೆ ತೆರೆಯುವ ಸಂದರ್ಭದಲ್ಲಿ ಕೊಟ್ಟ ಗುರುತಿನ ಚೀಟಿಯ ಜೆರಾಕ್ಸ್ ಮಾಡಿ ಅದನ್ನು ಬಳಸಿಕೊಂಡು ಕಾಳಧನಿಕರಿಗೆ ನೆರವಾಗುತ್ತಿವೆ. ಹಾಗಾಗಿ ನಿಮ್ಮ ಹಣವನ್ನು ಬದಲಾಯಿಸಿಕೊಳ್ಳುವ ವೇಳೆ ಅಥವಾ ಡೆಪಾಸಿಟ್ ಮಾಡುವಾಗ ನೀವು ಬ್ಯಾಂಕ್ ಗೆ ಕೊಡುವ ಐಡಿ ಪ್ರೂಫ್ ಅನ್ನು ಅಟೆಸ್ಟ್ ಮಾಡಿಸಿ. ಯಾವ ಕಾರಣಕ್ಕೆ, ಯಾವ ದಿನಾಂಕದಂದು ಐಡಿ ಪ್ರೂಫ್ ನೀಡುತ್ತಿದ್ದೀರಾ ಎಂಬುದನ್ನು ಫೋಟೋಕಾಪಿ ಮೇಲೆ ಬರೆಯಿರಿ. ಹಾಗೆ ಮಾಡಿದಲ್ಲಿ ನಿಮ್ಮ ಗುರುತಿನ ಚೀಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಅಸಾಧ್ಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...