alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರೈಲ್ವೆ ಟಿಕೆಟ್ ಅನ್ನು ಇನ್ಮುಂದೆ ಬೇರೊಬ್ಬರಿಗೆ ವರ್ಗಾಯಿಸಬಹುದು, ಹೇಗೆ ಗೊತ್ತಾ…?

ನೀವು ಬುಕ್ಕಿಂಗ್ ಮಾಡಿರೋ ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದ್ರೆ ಅದನ್ನು ಬೇರೆಯವರಿಗೆ ಟ್ರಾನ್ಸ್ ಫರ್ ಮಾಡಲು ಇಲಾಖೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಕೆಲವೊಂದು ನಿಯಮಗಳನ್ನು ಕೂಡ ಜಾರಿ ಮಾಡಿದೆ.

ಪ್ರಯಾಣಿಕ ಸರ್ಕಾರಿ ನೌಕರನಾಗಿದ್ದಲ್ಲಿ ಟಿಕೆಟ್ ಟ್ರಾನ್ಸ್ ಫರ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ 24 ಗಂಟೆಗಳ ಮೊದಲು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು.

ನಿಮ್ಮ ಹೆಸರಲ್ಲಿ ಬುಕ್ಕಿಂಗ್ ಆಗಿರುವ ಟಿಕೆಟ್ ಅನ್ನು ಕುಟುಂಬ ಸದಸ್ಯರಾದ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಪತಿ ಮತ್ತು ಪತ್ನಿಯ ಹೆಸರಿಗೆ ವರ್ಗಾಯಿಸಲು ಅವಕಾಶವಿದೆ.

ಪ್ರಯಾಣಿಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಲ್ಲಿ, ರೈಲು ಹೊರಡುವ 48 ಗಂಟೆಗಳ ಮೊದಲು ಅದೇ ಸಂಸ್ಥೆಯ ಇನ್ನೋರ್ವ ವಿದ್ಯಾರ್ಥಿ ಹೆಸರಿಗೆ ಟಿಕೆಟ್ ಟ್ರಾನ್ಸ್ ಫರ್ ಮಾಡಲು ಮುಖ್ಯಸ್ಥರು ಮನವಿ ಸಲ್ಲಿಸಬೇಕು.

ಪ್ರಯಾಣಿಕರು ಮದುವೆ ಅಥವಾ ಇತರ ಸಮಾರಂಭಕ್ಕೆ ಹೊರಟಿದ್ದಲ್ಲಿ 48 ಗಂಟೆಗಳ ಮೊದಲು ಸಮಾರಂಭದ ಸಂಘಟಕರು ಟಿಕೆಟ್ ವರ್ಗಾವಣೆಗೆ ಮನವಿ ಸಲ್ಲಿಸಬೇಕಾಗುತ್ತದೆ.

ಪ್ರಯಾಣಿಕರು ಯಾವುದೇ ಕೆಡೆಟ್ ಗಳ ಸದಸ್ಯರಾಗಿದ್ದಲ್ಲಿ, ಆ ಕೆಡೆಟ್ ನ ಮುಖ್ಯಸ್ಥರು ಟಿಕೆಟ್ ಅನ್ನು ಬೇರೊಬ್ಬ ಸದಸ್ಯನಿಗೆ ವರ್ಗಾಯಿಸುವಂತೆ 24 ಗಂಟೆ ಮೊದಲು ಮನವಿ ಸಲ್ಲಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...