alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಕ್ನಾಥ್ ಕೋಳಿ ಮೊಟ್ಟೆ ಬೆಲೆ 50 ರೂ. ಮಾಂಸ ಕೆ.ಜಿ. ಗೆ 500 ರೂ.

ಕಪ್ಪು ಬಣ್ಣದ ಕಡಕ್ನಾಥ್ ಕೋಳಿಯ ಒಂದು ಮೊಟ್ಟೆ ಬೆಲೆ ಬರೋಬ್ಬರಿ 50 ರೂಪಾಯಿ. ಸಾಮಾನ್ಯ ಕೋಳಿ ಬೆಲೆಗೆ ಹೋಲಿಸಿದ್ರೆ ಈ ಕೋಳಿ ಮೊಟ್ಟೆ ಬೆಲೆ ಆನೇಕ ಪಟ್ಟು ಹೆಚ್ಚು. ಈ ಕೋಳಿ ರುಚಿ ಹಾಗೂ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಮಧ್ಯಪ್ರದೇಶದ ಝಾಬುವಾ ಜಿಲ್ಲೆಯ ಕೋಳಿ ಇದು. ಆದ್ರೆ ಈಗ ದೇಶದ ಎಲ್ಲ ಭಾಗದಲ್ಲಿಯೂ ಸಿಗುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಜನರು ಇದನ್ನು ಸಾಕಲು ಶುರುಮಾಡಿದ್ದಾರೆ. ಈ ಕಪ್ಪು ಕೋಳಿ ಮಾಂಸಕ್ಕೂ ಹೆಚ್ಚಿನ ಬೇಡಿಕೆಯಿದೆ. ಕೆ.ಜಿ. ಕಪ್ಪು ಕೋಳಿ ಮಾಂಸ 500 ರೂಪಾಯಿವರೆಗೆ ಮಾರಾಟವಾಗ್ತಿದೆ.

ಪಶುಸಂಗೋಪನೆ ಇಲಾಖೆ ಪ್ರಕಾರ ಈ ಕಡಕ್ನಾಥ್ ಕೋಳಿ ಸಾಕಣೆ ಬಹಳ ಸುಲಭ. ಚಿಕನ್ ಪ್ರಿಯರು ಈ ಕೋಳಿ ಮಾಂಸವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಕೋಳಿ ಮೊಟ್ಟೆ ಮಾರುಕಟ್ಟೆಯಲ್ಲಿ 25 ರೂಪಾಯಿಗೆ ಸಿಗ್ತಿದೆ. ಆನ್ಲೈನ್ ನಲ್ಲಿ ಇದ್ರ ಬೆಲೆ 50 ರೂಪಾಯಿ. ಅಪರೂಪದ ಪ್ರದೇಶದಲ್ಲಿ ಇದ್ರ ಬೆಲೆ ಇನ್ನೂ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಬೆಲೆ ಕಡಿಮೆ.

ಸಾಮಾನ್ಯವಾಗಿ 6 ತಿಂಗಳ ದೇಸಿ ಕೋಳಿ ಬೆಲೆ 80-90 ರೂಪಾಯಿ. ಆದ್ರೆ ಈ ಕಪ್ಪು ಕೋಳಿ 100-150 ರೂಪಾಯಿಗೆ ಮಾರಾಟವಾಗುತ್ತದೆಯಂತೆ. 12 ತಿಂಗಳ ದೇಸಿ ಕೋಳಿ ಬೆಲೆ 150-200 ರೂಪಾಯಿಯಾದ್ರೆ ಕಡಕ್ನಾಥ್ ಕೋಳಿ 250 -300 ರೂಪಾಯಿ ಬೆಲೆ ಬಾಳುತ್ತದೆ.

ತುಂಬಾ ಬೆಲೆ ಬಾಳುವ ಈ ಕೋಳಿ ಸಾಕಣೆ ಅಷ್ಟು ಕಷ್ಟವಲ್ಲ. ಹದ್ದಿನ ಭಯ ಅಷ್ಟಾಗಿ ಇರುವುದಿಲ್ಲ. ನಾಯಿಯನ್ನೂ ಇದು ಹೆದರಿಸಿ ಓಡಿಸುತ್ತದೆ. ಹಾಗಾಗಿ ಕಡಕ್ನಾಥ್ ಕೋಳಿ ಸಾಕಣೆ ಶುರುಮಾಡಿ ಹೆಚ್ಚೆಚ್ಚು ಗಳಿಸಿ ಎಂಬುದು ತಜ್ಞರ  ಸಲಹೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...