alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರ ಫೋಟೋಕ್ಕೆ xiaomi ಕೊಡ್ತಿದೆ 19 ಲಕ್ಷ ರೂಪಾಯಿ

ಚೀನಾ ಕಂಪನಿ xiaomi ಫೋಟೋ ಸ್ಪರ್ಧೆ ಶುರುಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಫೋಟೋವನ್ನು ಕಳುಹಿಸಬೇಕಾಗುತ್ತದೆ. ವಿಜೇತರಿಗೆ 19 ಲಕ್ಷ 64 ಸಾವಿರ ರೂಪಾಯಿ ಸಿಗಲಿದೆ.

ಕಂಪನಿ ಈ ಸ್ಪರ್ಧೆಯನ್ನು ಭಾರತ, ರಷ್ಯಾ, ವಿಯೆಟ್ನಾಂ ಹಾಗೂ ಇಂಡೋನೇಷ್ಯಾದಲ್ಲಿ ಆಯೋಜನೆ ಮಾಡಿದೆ. ಈ ಸ್ಪರ್ಧೆ ಈಗಾಗಲೇ ಶುರುವಾಗಿದ್ದು ಡಿಸೆಂಬರ್ 11ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ xiaomi  Mi A1 ಬಳಕೆದಾರರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಈ ಸ್ಮಾರ್ಟ್ಫೋನ್ ಕಂಪನಿ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಿದ್ದು, ಫೋನ್ ಪ್ರಚಾರಕ್ಕಾಗಿ ಈ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು Mi A1ನಲ್ಲಿ ಫೋಟೋ ತೆಗೆದು ಸ್ಪರ್ಧೆಗೆ ಕಳುಹಿಸಬೇಕಾಗುತ್ತದೆ. Mi ವೆಬ್ ಸೈಟ್ ಗೆ ಹೋಗಿ ಹೆಸರು ನೋಂದಾಯಿಸಬೇಕು. ಮಾಹಿತಿಯೊಂದಿಗೆ ಫೋಟೋವನ್ನು ಅಪ್ಲೋಡ್ ಮಾಡಬೇಕು. ಬೇರೆ ಬೇರೆ ವಿಭಾಗಗಳಿದ್ದು, ಉತ್ತಮ ಫೋಟೋ ಆಯ್ಕೆಯನ್ನು ಸಮಿತಿ ಮಾಡಲಿದೆ. ವಿಜೇತರ ಹೆಸರು ಡಿಸೆಂಬರ್ 20ರಂದು ಪ್ರಕಟವಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...