alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಂದಿ, ಕಾಡಿಗೆಗೆ ಇಲ್ಲದ GST ಸ್ಯಾನಿಟರಿ ನ್ಯಾಪ್ಕಿನ್ ಗೆ ಯಾಕೆ?

ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಚರ್ಚೆಯಾಗ್ತಾನೇ ಇದೆ. ಈ ಮಧ್ಯೆ ದೆಹಲಿ ಹೈಕೋರ್ಟ್ ಕೂಡ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಿಂದಿ, ಸಿಂದೂರ, ಕಾಡಿಗೆಗೆ ವಿನಾಯಿತಿ ನೀಡಿರುವ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ ಜಿಎಸ್ಟಿ ವಿಧಿಸಿರೋದು ಯಾಕೆ ಅಂತಾ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.

ಸ್ಯಾನಿಟರಿ ನ್ಯಾಪ್ಕಿನ್ ಅತ್ಯಂತ ಅಗತ್ಯವಾದ ವಸ್ತುಗಳಲ್ಲೊಂದು, ಹಾಗಾಗಿ ಅದಕ್ಕೆ ಜಿಎಸ್ಟಿ ವಿಧಿಸಿರೋದು ಸರಿಯಲ್ಲ ಅಂತಾ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಜಸ್ಟಿಸ್ ಸಿ.ಹರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಪ್ಕಿನ್ ಗಳ ಮೇಲೆ ಜಿಎಸ್ಟಿ ವಿಧಿಸುವ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದೊಂದಿಗೆ ಚರ್ಚಿಸಿದ್ದೀರಾ? ಕೇವಲ ಆಮದು ಮತ್ತು ರಫ್ತು ಸುಂಕದ ಮೇಲೆ ಕಣ್ಣಿಟ್ಟು ತೆರಿಗೆ ವಿಧಿಸಿರೋದು ಸರಿಯಲ್ಲ. ವಿಶಾಲ ದೃಷ್ಟಿಕೋನದಿಂದ ಯೋಚಿಸಿ ಅಂತಾ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ಕೂಡ ನೀಡಲಾಗಿದೆ. ತೆರಿಗೆ ವಿನಾಯ್ತಿ ನೀಡಿದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆ ಏರಿಕೆಯಾಗಲಿದೆ ಅನ್ನೋದು ಸರ್ಕಾರದ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...