alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು ವಾಟ್ಸ್ ಅಪ್ ಸೇವೆ

ವಾಟ್ಸ್ ಅಪ್ ಇಲ್ದೆ ಲೈಫ್ ಇಲ್ಲ ಎನ್ನುವಂತಾಗಿದೆ. ವಾಟ್ಸ್ ಅಪ್ ನಲ್ಲಿ ಸಂದೇಶದ ಜೊತೆಗೆ ಫೈಲ್ ರವಾನೆ, ವಿಡಿಯೋ ಕಾಲಿಂಗ್ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಹಾಗಾಗಿ ಜನರು ವಾಟ್ಸ್ ಅಪ್ ಗೆ ಮತ್ತಷ್ಟು ಹತ್ತಿರವಾಗ್ತಿದ್ದಾರೆ. ಈ ಮಧ್ಯೆ ಗುರುವಾರ ಜಾಗತಿಕ ಮಟ್ಟದಲ್ಲಿ ವಾಟ್ಸ್ ಅಪ್ ಅಪ್ಲಿಕೇಷನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

ಉತ್ತರ ಯುರೋಪ್, ಮೆಕ್ಸಿಕೋ, ಬ್ರೆಜಿಲ್ ಜೊತೆಗೆ ಭಾರತದ ಕೆಲ ಭಾಗಗಳಲ್ಲಿಯೂ ವಾಟ್ಸ್ ಅಪ್ ಸಮಸ್ಯೆಯಾಗಿತ್ತು. ರಾತ್ರಿ 9.42ರ ಸುಮಾರಿಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಶೇಕಡಾ 46ರಷ್ಟು ಮಂದಿ ಸಮಸ್ಯೆ ಎದುರಿಸಿದ್ದರು. ಶೇಕಡಾ 31ರಷ್ಟು ಮಂದಿ ಸಂದೇಶ ರವಾನೆ ಹಾಗೂ ಸ್ವೀಕರಿಸಲು ಸಮಸ್ಯೆ ಎದುರಿಸಿದ್ದರಂತೆ. ಶೆಕಡಾ 25ರಷ್ಟು ಮಂದಿಗೆ ಲಾಗ್ ಇನ್ ಆಗುವ ಸಮಸ್ಯೆ ಕಾಡಿತ್ತಂತೆ.

ಫೇಸ್ಬುಕ್ ಮಾಲಿಕತ್ವದ ಕಂಪನಿ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗುರುವಾರು ಸುಮಾರು 5 ಗಂಟೆಗಳ ಕಾಲ ವಾಟ್ಸ್ ಅಪ್ ಬಳಕೆಯಲ್ಲಿ ತೊಂದರೆಯಾಗಿತ್ತು. ಸಮಸ್ಯೆ ಪರಿಹಾರವಾಗಿದೆ. ಈ ಬಗ್ಗೆ ಕ್ಷಮೆ ಕೇಳುತ್ತೇವೆಂದು ಅವರು ಹೇಳಿದ್ದಾರೆ.

ವಾಟ್ಸ್ ಅಪ್ ನಲ್ಲಾದ ಸಮಸ್ಯೆಯನ್ನು ಬಳಕೆದಾರರು ಟ್ವೀಟರ್ ನಲ್ಲಿ ಹೇಳಿದ್ದಾರೆ. ಕೆಲವರು ಅನೇಕ ಬಾರಿ ಫೋನ್ ಸ್ವಿಚ್ ಆಫ್ ಮಾಡಿ ವಾಟ್ಸ್ ಅಪ್ ಗೆ ಲಾಗ್ ಇನ್ ಆಗಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...