alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಡಿಲೀಟ್ ಮಾಡುವಂತೆ ವಾಟ್ಸಾಪ್ ಸಹ ಸಂಸ್ಥಾಪಕ ಹೇಳಿದ್ಯಾಕೆ…?

ವಾಟ್ಸಾಪ್ ನ ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಫೇಸ್ಬುಕ್ ಡಿಲೀಟ್ ಮಾಡುವಂತೆ ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾವನ್ನು ಅನುಮತಿಯಿಲ್ಲದೇ ಪಡೆದಿದೆ ಎಂಬ ಮಾಹಿತಿ ಬೆನ್ನಲ್ಲೇ ಆಕ್ಟನ್ ಈ ರೀತಿ ಟ್ವೀಟ್ ಮಾಡಿದ್ದಾರೆ.

2014ರಲ್ಲಿ 19 ಬಿಲಿಯನ್ ಡಾಲರ್ ಗೆ ಫೇಸ್ಬುಕ್, ವಾಟ್ಸಾಪ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ವಾಟ್ಸಾಪ್ ಸಂಸ್ಥೆಯ ಮಾರಾಟದ ಬಳಿಕವೂ ಆಕ್ಟನ್ ಹುದ್ದೆಯಲ್ಲಿ ಮುಂದುವರಿದಿದ್ದರು. ಆದ್ರೆ ಈ ವರ್ಷಾರಂಭದಲ್ಲಿ ಹುದ್ದೆ ತೊರೆದಿದ್ದರು. ಈಗ ಸಿಗ್ನಲ್ ಫೌಂಡೇಶನ್ ಎಂಬ ಕಂಪನಿಯೊಂದನ್ನು ಆರಂಭಿಸಿದ್ದಾರೆ.

ಬ್ರಿಟನ್ ನ ಕೇಂಬ್ರಿಡ್ಜ್ ಎನಲಿಟಿಕಾ, ಫೇಸ್ಬುಕ್ ಬಳಕೆದಾರರ ಡೇಟಾ ಕದಿಯುತ್ತಿದೆ ಎಂಬ ಮಾಹಿತಿಯನ್ನು ಹೊರಹಾಕಿದ ಬಳಿಕ ಸಂಸ್ಥೆಯ ಷೇರುಗಳ ಮೌಲ್ಯ ಶೇ.7ರಷ್ಟು ಕುಸಿತ ಕಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಚುನಾವಣಾ ಪ್ರಚಾರಕ್ಕೂ ಇದನ್ನೆಲ್ಲ ಬಳಸಿಕೊಳ್ಳಲಾಗಿತ್ತು ಅಂತಾ ಕೇಂಬ್ರಿಡ್ಜ್ ಎನಲಿಟಿಕಾ ಬಹಿರಂಗಪಡಿಸಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...