alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ನಂತ್ರ ವಾಟ್ಸಾಪ್ ಬಂದ್..!

whatsapp-1

ವಾಟ್ಸಾಪ್ ಪ್ರಿಯರಿಗೊಂದು ಬ್ಯಾಡ್ ನ್ಯೂಸ್. ಡಿಸೆಂಬರ್ ನಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಬರೋದಿಲ್ಲ. ವಾಟ್ಸಾಪ್ ನಲ್ಲಿ ಚಾಟ್ ಮಾಡ್ತಾ ಸಮಯ ಕಳೆಯುವವರು ಈಗ್ಲೆ ಎಚ್ಚೆತ್ತುಕೊಳ್ಳಿ. ಚಾಟ್ ಮಾಡೋಕೆ ಬೇರೆ ಮಾರ್ಗ ಅಥವಾ ಬೇರೆ ಫೋನ್ ಖರೀದಿ ಮಾಡಿ.

ವಾಟ್ಸಾಪ್ ಕಂಪನಿ ಕೆಲ ಸ್ಮಾರ್ಟ್ ಫೋನ್ ಗಳಿಗೆ ನೀಡ್ತಿದ್ದ ತನ್ನ ಸೇವೆಯನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ ನಿಂದ ಕೆಲ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಬರೋದಿಲ್ಲ. ನಿಮ್ಮ ಬಳಿ ನೋಕಿಯಾ E6 ಇದ್ದಲ್ಲಿ ಇದ್ರಲ್ಲಿ ವಾಟ್ಸಾಪ್ ಬಳಸೋದು ಸಾಧ್ಯವಿಲ್ಲ. ಹಾಗೆ ನೋಕಿಯಾ 5233, ನೋಕಿಯಾC5, ನೋಕಿಯಾ ಆಶಾ 306 ಮತ್ತು ನೋಕಿಯಾ E52 ಫೋನ್ ವಾಟ್ಸಾಪ್ ಗೆ ಸಪೋರ್ಟ್ ಮಾಡೋದಿಲ್ಲ.

ವಾಸ್ತವವಾಗಿ ವಾಟ್ಸಾಪ್ ಬ್ಲಾಕ್ಬೆರಿ ಹಾಗೂ ನೋಕಿಯಾ ಮತ್ತು ಕೆಲ ಹಳೆ ಮೊಬೈಲ್ ಗಳಿಗೆ ತನ್ನ ಸೇವೆ ನೀಡದಿರಲು ನಿರ್ಧರಿಸಿದೆ. ಬ್ಲಾಕ್ಬೆರಿ ಜೊತೆಗೆ ನೋಕಿಯಾ ಎಸ್ 40, ನೋಕಿಯಾ ಸಿಂಬಿಯಾನ್ ಎಸ್ 60, ಆಂಡ್ರಾಯ್ಡ್ 2.1,2.2 ಮತ್ತು ವಿಂಡೋಸ್ ಫೋನ್ 7.1 ಫೋನ್ ಗಳಿಗೂ ವಾಟ್ಸಾಪ್ ಲಭ್ಯವಾಗುವುದಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...