alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿಗೆ ಇಂದು ಕೊನೆ ದಿನ….ಗಡುವು ಮಿಸ್ಸಾದ್ರೆ ಮುಂದೇನು?

income-tax-return-1

2016-17ನೇ ಆರ್ಥಿಕ ವರ್ಷದ ಆದಾಯ ತೆರಿಗೆ ಸಲ್ಲಿಸಲು ಇಂದು ಕೊನೆಯ ದಿನ. ಹಿರಿಯ ನಾಗರಿಕರು ಹಾಗೂ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವರಿಗೆ ರಿಟರ್ನ್ ಫೈಲ್ ಮಾಡಲು ಇಂದು ಮಧ್ಯರಾತ್ರಿವರೆಗೂ ಕಚೇರಿಗಳು ತೆರೆದಿರುತ್ತವೆ.

ಆದ್ರೆ ಕಾರಣಾಂತರಗಳಿಂದ ಇವತ್ತು ಆದಾಯ ತೆರಿಗೆ ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ, ಈ ವರ್ಷ ನೀವು ರಿಟರ್ನ್ ಫೈಲ್ ಮಾಡಲು ಸಾಧ್ಯವೇ ಇಲ್ಲ ಎಂದರ್ಥವಲ್ಲ. 2018ರ ಮಾರ್ಚ್ ವರೆಗೂ ಬಿಲೇಟೆಡ್ ರಿಟರ್ನ್ ಫೈಲ್ ಮಾಡಲು ನಿಮಗೆ ಅವಕಾಶವಿದೆ.

ಆದ್ರೆ ಕೆಲವೊಂದು ತೆರಿಗೆ ಲಾಭಗಳು ನಿಮಗೆ ಸಿಗುವುದಿಲ್ಲ. ಕ್ಯಾಪಿಟಲ್ ಲಾಸ್ ಗಳನ್ನು ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಗಡುವಿನೊಳಗೆ ಆದಾಯ ತೆರಿಗೆ ಪಾವತಿಸದೇ ಇದ್ದಲ್ಲಿ, ಪ್ರತಿ ತಿಂಗಳಿಗೆ ಶೇ.1 ರ ಬಡ್ಡಿ ದರದಲ್ಲಿ ನೀವು ಪಾವತಿಸದ ಟ್ಯಾಕ್ಸ್ ಲಯಾಬಿಲಿಟೀಸ್ ಮೇಲೆ ದಂಡ ಪಾವತಿಸಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ತೆರಿಗೆಗೆ ಬೇಡಿಕೆ ಇಟ್ಟಲ್ಲಿ ಅದಕ್ಕೂ ನೀವು ಚಕಾರವೆತ್ತುವಂತಿಲ್ಲ. ಅದರ ಮೇಲೂ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಬಿಲೇಟೆಡ್ ರಿಟರ್ನ್ ಸಲ್ಲಿಸುತ್ತಿರುವವರೆಲ್ಲ ಆದಷ್ಟು ಬೇಗ ಟ್ಯಾಕ್ಸ್ ಲಯಾಬಿಲಿಟೀಸ್ ಅನ್ನು ಡೆಪಾಸಿಟ್ ಮಾಡುವುದು ಒಳಿತು. ತಡವಾಗಿ ತೆರಿಗೆ ಪಾವತಿಸಿದವರಿಗೆ 5000 ರೂ. ದಂಡ ವಿಧಿಸಲು ಅವಕಾಶವಿದೆ. ಇದಕ್ಕೆ ಅವಕಾಶ ಕೊಡದೆ ಇಂದೇ ತೆರಿಗೆ ಪಾವತಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...