alex Certify
ಕನ್ನಡ ದುನಿಯಾ       Mobile App
       

Kannada Duniya

ವೊಡಾಫೋನ್ ನ ಈ ಪ್ಲಾನ್ ನಲ್ಲಿ ಪ್ರತಿದಿನ ಸಿಗಲಿದೆ 1.4 ಜಿಬಿ ಡೇಟಾ

ಜಿಯೋ ಹಾಗೂ ಏರ್ಟೆಲ್ ನಂತ್ರ ಈಗ ವೊಡಾಫೋನ್ ಸರದಿ. ವೊಡಾಫೋನ್ 198 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿ ದಿನ 1.4 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಹಾಗೂ ರೋಮಿಂಗ್ ಕಾಲ್ ಜೊತೆ 100 ಮೆಸ್ಸೇಜ್ ಉಚಿತವಾಗಿ ಸಿಗಲಿದೆ.

ಬದಲಾದ ಪ್ಲಾನ್ ವ್ಯಾಲಿಡಿಟಿ 24 ದಿನಗಳವರೆಗೆ ಇರಲಿದೆ. ಈ ಪ್ಲಾನ್ ಏರ್ಟೆಲ್ ನ 199 ಪ್ಲಾನ್ ಹಾಗೂ ಜಿಯೋದ 149 ಪ್ಲಾನ್ ಗೆ ಟಕ್ಕರ್ ನೀಡಲಿದೆ. ಈ ಹಿಂದೆ 198 ಪ್ಲಾನ್ ರಿಚಾರ್ಜ್ ಮಾಡಿಸಿದ್ರೆ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾ ಸಿಗ್ತಾಯಿತ್ತು. ಅನಿಯಮಿತ ವಾಯ್ಸ್ ಕಾಲ್ ಜೊತೆ 100 ಎಸ್ಎಂಎಸ್ ಸಿಗ್ತಾ ಇತ್ತು.

ಬದಲಾದ ಪ್ಲಾನ್ ನಲ್ಲಿ ಕರೆ ಮಾಡಲು ಪ್ರತಿದಿನ 250 ನಿಮಿಷ ನಿಗದಿಯಾಗಿದೆ. 24 ದಿನಕ್ಕೆ 1000 ನಿಮಿಷ ಸಿಗಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಡೇಟಾ ವಾರ್ ಶುರುವಾಗಿದೆ. ಅತಿ ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡಿ ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಪ್ರಯತ್ನಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...