alex Certify
ಕನ್ನಡ ದುನಿಯಾ       Mobile App
       

Kannada Duniya

ವೊಡಾಫೋನ್ ನೀಡ್ತಿದೆ ಅಗ್ಗದ ಪ್ಲಾನ್ ನಲ್ಲಿ ಅನಿಯಮಿತ ಕರೆ, ಡೇಟಾ

ವೊಡಾಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ. ವೊಡಾಫೋನ್, ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ಲಾನ್ ಒಂದನ್ನು ಜಾರಿಗೆ ತಂದಿದೆ. ಇದ್ರಲ್ಲಿ ಪ್ರತಿದಿನ 1ಜಿಬಿ ಡೇಟಾ ಸಿಗಲಿದೆ. ಇದ್ರ ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯವನ್ನೂ ಈ ಪ್ಲಾನ್ ನಲ್ಲಿ ವೊಡಾಫೋನ್ ಗ್ರಾಹಕರಿಗೆ ನೀಡ್ತಿದೆ.

158 ರೂಪಾಯಿಯ ಈ ಪ್ಲಾನ್ ವಿಶೇಷವೆಂದ್ರೆ ಗ್ರಾಹಕರಿಗೆ ರೋಮಿಂಗ್ ಕರೆ ಕೂಡ ಅನಿಯಮಿತವಾಗಿ ಸಿಗ್ತಿದೆ. ಆದ್ರೆ ಕಂಪನಿ ಒಂದು ಷರತ್ತಿನ ಮೇಲೆ ಅನಿಯಮಿತ ಕರೆ ನೀಡ್ತಿದೆ. ಗ್ರಾಹಕರು ಪ್ರತಿದಿನ 250 ಕರೆ ಮಾತ್ರ ಮಾಡಬೇಕಾಗುತ್ತದೆ. ಅಂದ್ರೆ 28 ದಿನಕ್ಕೆ 1000 ಕರೆ ಮಾತ್ರ ಮಾಡಬಹುದಾಗಿದೆ. ಇದಕ್ಕಿಂತ ಹೆಚ್ಚು ಕರೆ ಮಾಡಿದ್ರೆ ಕರೆಗೆ ಹಣ ತೆರಬೇಕಾಗುತ್ತದೆ.

ವೊಡಾಪೋನ್, ಜಿಯೋ ಹಾಗೂ ಏರ್ಟೆಲ್ ಗೆ ಟಕ್ಕರ್ ನೀಡಲು ಈ ಪ್ಲಾನ್ ಶುರು ಮಾಡಿದೆ. ಜೊತೆಗೆ ತನ್ನ ಉಳಿದ ಪ್ಲಾನ್ ಡೇಟಾ ಮಿತಿಯನ್ನು ಕೂಡ ಏರಿಕೆ ಮಾಡಿದೆ. 198 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1.4 ಜಿಬಿ ಡೇಟಾ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...