alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 199 ರೂ.ಗೆ ಇಲ್ಲಿ ಸಿಗ್ತಿದೆ ಮೇಕ್ ಇನ್ ಇಂಡಿಯಾ ಮೊಬೈಲ್

ದೀಪಾವಳಿ ಹತ್ತಿರ ಬರ್ತಿದೆ. ಇ-ಕಾಮರ್ಸ್ ಕಂಪನಿ ಸೇರಿದಂತೆ ಎಲ್ಲ ಮಳಿಗೆಗಳಲ್ಲಿ ಭರ್ಜರಿ ಆಫರ್ ನೀಡಲಾಗ್ತಿದೆ. ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಂತಹ ಇ ಕಾಮರ್ಸ್ ಕಂಪನಿಗಳು ವಿದೇಶಿ ಮೊಬೈಲ್ ಗಳ ಮೇಲೆ ಭರ್ಜರಿ ರಿಯಾಯಿತಿ ನೀಡ್ತಾ ಇವೆ. ವಿದೇಶಿ ಹ್ಯಾಂಡ್ ಸೆಟ್ ಬಿಟ್ಟು ದೇಶಿ ಹ್ಯಾಂಡ್ ಸೆಟ್ ಖರೀದಿ ಮಾಡುವ ಆಸೆ ನಿಮಗಿದ್ದರೆ ಈ ಅವಕಾಶ ಬಿಡಬೇಡಿ.

Viral Deal ವೆಬ್ ಸೈಟ್, ಮೇಕ್ ಇನ್ ಇಂಡಿಯಾ ಹ್ಯಾಂಡ್ ಸೆಟ್ ಗಳ ಮೇಲೆ ಭಾರೀ ರಿಯಾಯಿತಿ ನೀಡ್ತಿದೆ. ಶೇಕಡಾ 92ರಷ್ಟು ಡಿಸ್ಕೌಂಟ್ ಜೊತೆಗೆ ನೀವು ಮೊಬೈಲ್ ಖರೀದಿ ಮಾಡಬಹುದಾಗಿದೆ. ಈ ಡೀಲ್ ನಲ್ಲಿ ನಿಮಗೆ ಕೇವಲ 199 ರೂಪಾಯಿಗೆ ಮೊಬೈಲ್ ಸಿಗ್ತಿದೆ.

ಈ ಸೇಲ್ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ. 50 ಸಾವಿರ ಹ್ಯಾಂಡ್ ಸೆಟ್ ಸೇಲ್ ಮಾಡಲು ವೆಬ್ಸೈಟ್ ಮುಂದಾಗಿದೆ. 199 ರೂಪಾಯಿಗೆ ಸಿಗ್ತಿರುವ ಈ ಮೊಬೈಲ್ ಬೆಲೆ 2599 ರೂಪಾಯಿ. ನೋಕಿಯಾ 3310 ಹ್ಯಾಂಡ್ ಸೆಟ್ ಹೋಲುವ ಈ ಮೊಬೈಲ್ ಇಂಟರ್ನೆಟ್, ವಾಟ್ಸ್ ಅಪ್, ಫೇಸ್ಬುಕ್ ಹಾಗೂ ಟ್ವೀಟರ್ ಸಪೋರ್ಟ್ ಮಾಡುತ್ತದೆ. ಇದ್ರಲ್ಲಿ ಕಲರ್ ಆಯ್ಕೆಯಿಲ್ಲ. ನಿಮ್ಮ ದುರಾದೃಷ್ಟಕ್ಕೆ ಹ್ಯಾಂಡ್ ಸೆಟ್ ಸ್ಟಾಕ್ ಮುಗಿದಿದ್ದರೆ ನಿಮಗೆ ಈ ಹಣಕ್ಕೆ ವಾಚ್ ನೀಡಲಿದೆ ವೆಬ್ ಸೈಟ್. ವಾಚ್ ಬೇಡ ಎನ್ನುವ ಗ್ರಾಹಕರಿಗೆ ಹಣ ವಾಪಸ್ ಮಾಡುವ ಭರವಸೆ ನೀಡಿದೆ Viral Deal.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...