alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಮಾಡಿರೋ ಮೋಸದಲ್ಲಿ ರಾಜಕಾರಣಿಗಳದ್ದೂ ಇದೆ ಕೈವಾಡ

ಭಾರತದ ವಿವಿಧ ಬ್ಯಾಂಕ್ ಗಳಿಗೆ ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿರೋದ್ರ ಹಿಂದೆ ರಾಜಕಾರಣಿಗಳ ಕೈವಾಡವಿದೆ ಅನ್ನೋದು ಬಹಿರಂಗವಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಬ್ರಿಟನ್ ನ ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಶನ್ ಆಫೀಸ್ ಸಾಕಷ್ಟು ವಿವರಗಳನ್ನು ಬಯಲಿಗೆಳೆದಿದೆ.

ಕಿಂಗ್ ಫಿಶರ್ ಏರ್ಲೈನ್ಸ್ ಗೆ 2000 ಕೋಟಿ ಕಾರ್ಪೊರೇಟ್ ಸಾಲ ಕೊಡುವಂತೆ ಗಣ್ಯವ್ಯಕ್ತಿಗಳಿಂದ ಒತ್ತಡವಿತ್ತು ಅಂತಾ ಎಸ್ ಎಫ್ ಓ ಹೇಳಿದೆ. ಸಿಬಿಐ ವಶಕ್ಕೆ ಪಡೆದಿದ್ದ ಕಂಪ್ಯೂಟರ್ ಗಳಿಂದ ಈ ವಿವರ ಲಭ್ಯವಾಗಿದೆ. ಎಸ್ ಬಿ ಐ, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾಗೆ ಹಣಕಾಸು ಸಚಿವಾಲಯದ ಅಧಿಕಾರಿಗಳೇ ಕಿಂಗ್ ಫಿಶರ್ ಗೆ ಸಾಲ ಕೊಡುವಂತೆ ಇಮೇಲ್ ರವಾನಿಸಿದ್ದರು.

ಒಟ್ಟು 157 ಪುಟಗಳ ತನಿಖಾ ವಿವರವನ್ನು ಎಸ್ ಎಫ್ ಓ ನೀಡಿದೆ. ರಾಜಕಾರಣಿಗಳ ಸಹಾಯದಿಂದ ಮಲ್ಯ ಎದುರಾಳಿ ವಿಮಾನಯಾನ ಕಂಪನಿಗಳ ಡೇಟಾಗಳನ್ನೆಲ್ಲ ಡಿಜಿಸಿಎಯಿಂದ ಪಡೆದುಕೊಳ್ಳುತ್ತಿದ್ರು. ಅದಕ್ಕೆ ತಕ್ಕಂತೆ ಟಿಕೆಟ್ ದರ ನಿಗದಿ ಸೇರಿದಂತೆ ಇತರ ತಂತ್ರಗಳನ್ನು ಹೆಣೆಯುತ್ತಿದ್ರು.

ಎಷ್ಟೋ ರಾಜಕಾರಣಿಗಳಿಗೆ ಮಲ್ಯ ತಮ್ಮ ವಿಮಾನ ಪ್ರಯಾಣದಲ್ಲಿ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ್ದರು. ಚುನಾವಣೆ ಸಮಯದಲ್ಲಿ ಹೆಲಿಕಾಪ್ಟರ್ ಒದಗಿಸಿದ್ದರು. ಕಿಂಗ್ ಫಿಶರ್ ಏರ್ಲೈನ್ಸ್ ನಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಮಲ್ಯ, ಉಳಿದ ಡೈರೆಕ್ಟರ್ ಗಳ ಸಲಹೆಗೆ ಸೊಪ್ಪು ಹಾಕುತ್ತಿರಲಿಲ್ಲ.

ರಾಜಕಾರಣಿಗಳ ಸಹಾಯದಿಂದ್ಲೇ ವಿಜಯ್ ಮಲ್ಯ ಎಸ್ ಬಿ ಐ, ಐಡಿಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ 9000 ಕೋಟಿ ರೂಪಾಯಿ ಪಂಗನಾಮ ಹಾಕಿ ಲಂಡನ್ ಗೆ ಓಡಿ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...