alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಮೆಸೆಂಜರ್ ಅಪ್ ಡೇಟ್ ಮಾಡಿದ್ರೆ ಸಿಗುತ್ತೆ ಹೊಸ ಫೀಚರ್

whatsapp_head_1498718688

ಸೆಂಟ್ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಹೊಸ ಫೀಚರ್ ಒಂದನ್ನು ವಾಟ್ಸಾಪ್ ಪರಿಚಯಿಸಿದೆ. ಯಾವುದೋ ಧ್ಯಾನದಲ್ಲಿ ಮೆಸೇಜ್ ಕಳಿಸಿ, ನಂತರ ಅಯ್ಯೋ ಅದನ್ನು ಡಿಲೀಟ್ ಮಾಡ್ಬೇಕಿತ್ತು ಅಂತಾ ಎಷ್ಟೋ ಜನ ಅಂದುಕೊಂಡಿರ್ತಾರೆ.

ಆಕಸ್ಮಿಕವಾಗಿ ಸೆಂಟ್ ಆಗಿರೋ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಬಯಸ್ತಾರೆ. ಅಂಥವರಿಗೆಲ್ಲ ಈ ಹೊಸ ಅಪ್ ಡೇಟ್ ನಿಂದ ಅನುಕೂಲವಾಗಲಿದೆ. ಡೆಲಿವರಿ ಆಗಿರೋ ಸಂದೇಶಗಳನ್ನು ಕೂಡ ನೀವು ಇನ್ಮುಂದೆ ಡಿಲೀಟ್ ಮಾಡಬಹುದು.

ಟೆಕ್ಸ್ಟ್, ಇಮೇಜ್, ವಿಡಿಯೋ, GIF, ಡಾಕ್ಯುಮೆಂಟ್, ಕೋಟೆಡ್ ಮೆಸೇಜ್ ಗಳು, ಹಾಗೂ ಸ್ಟೇಟಸ್ ರಿಪ್ಲೈಗಳನ್ನು ಕೂಡ ಅನ್ ಸೆಂಡ್ ಮಾಡಬಹುದಾದ ಹೊಸ ಫೀಚರ್ ಅಳವಡಿಸಲಾಗಿದೆ. ಆದ್ರೆ ಇದಕ್ಕೆ ಇರುವುದು ಕೇವಲ ಐದು ನಿಮಿಷಗಳ ಕಾಲಾವಕಾಶ ಮಾತ್ರ.

ಅಷ್ಟರಲ್ಲಿ ಡಿಲೀಟ್ ಮಾಡದೇ ಇದ್ರೆ ನಂತರ ಆಪ್ಷನ್ ಲಭ್ಯವಿರುವುದಿಲ್ಲ. ಇನ್ನೊಂದಷ್ಟು ಹೊಸತನವನ್ನು ಕೂಡ ವಾಟ್ಸಾಪ್ ನಲ್ಲಿ ಪರಿಚಯಿಸಲಾಗಿದೆ. ಈ ಆಪ್ಷನ್ ಗಳನ್ನು ಪಡೆಯಲು ನಿಮ್ಮ ಮೆಸೆಂಜರ್ ಅನ್ನು ಅಪ್ ಡೇಟ್ ಮಾಡಿಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...