alex Certify
ಕನ್ನಡ ದುನಿಯಾ       Mobile App
       

Kannada Duniya

ವೆಚ್ಚ ಕಡಿತ ಮಾಡಲು ನೈಸರ್ಗಿಕ‌ ಅನಿಲಕ್ಕೆ ಮೊರೆ ಹೋಗಲಿದೆ ರೈಲ್ವೆ ಇಲಾಖೆ

ನವದೆಹಲಿ: ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ, ನೈಸರ್ಗಿಕ ಅನಿಲವನ್ನು ದೊಡ್ಡಮಟ್ಟದಲ್ಲಿ ಬಳಸಲು ಮುಂದಾಗಿದೆ. ಈ ಸಂಬಂಧ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಜತೆ ರೈಲ್ವೆ ಒಡಂಬಡಿಕೆ ಮಾಡಿಕೊಂಡಿದೆ.

ಇತರೆ ಇಂಧನಕ್ಕೆ ಹೋಲಿಸಿದರೆ ನೈಸರ್ಗಿಕ ಅನಿಲ ಶೇ.25 ರಷ್ಟು ಅಗ್ಗದಲ್ಲಿ ಲಭ್ಯವಾಗುತ್ತದೆ. ಹೀಗಾಗಿ ನೈಸರ್ಗಿಕ ಅನಿಲವನ್ನು ರೈಲ್ವೆಯು ತನ್ನ ವರ್ಕ್ ಶಾಪ್, ಉತ್ಪಾದನಾ ಘಟಕಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ. ಈಗಿನ ಒಡಂಬಡಿಕೆ ಪ್ರಕಾರ 2019 ರ ಜೂನ್ ಒಳಗೆ 54 ವರ್ಕ್ ಶಾಪ್ ಗಳನ್ನು ಈ ವ್ಯವಸ್ಥೆಗೆ ಬದಲಾಯಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಭಾರತೀಯ ರೈಲ್ವೆಯು ವಾರ್ಷಿಕ ಸುಮಾರು 3 ಶತಕೋಟಿ ಲೀಟರ್ ಡೀಸಲ್ ಅನ್ನು ಬಳಸುತ್ತದೆ. ಇದರಲ್ಲಿ ಪರ್ಯಾಯ ಇಂಧನದ ಪಾಲು ಹೆಚ್ಚಿಸಲು ವಿವಿಧ ಕ್ರಮಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ ಇಂಧನದ ಬದಲು ನೈಸರ್ಗಿಕ ಅನಿಲ ಬಳಕೆಯಿಂದ ರೈಲ್ವೆಗೆ ವಾರ್ಷಿಕ 17 ಕೋಟಿ ರೂ. ವರೆಗೆ ಉಳಿತಾಯವಾಗಲಿದೆ‌ ಎಂಬ ಅಂದಾಜು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...