alex Certify
ಕನ್ನಡ ದುನಿಯಾ       Mobile App
       

Kannada Duniya

ವಾವ್! ಏರ್ ಟೆಲ್ ನಿಂದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್

ನವದೆಹಲಿ: ರಿಲಯನ್ಸ್ ಜಿಯೋ ಬಂದ ಬಳಿಕ, ಮೊಬೈಲ್ ಸೇವಾ ಕ್ಷೇತ್ರದಲ್ಲಿ ಭಾರೀ ಪೈಪೋಟಿಯೇ ನಡೆದಿದೆ. ಜಿಯೋ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ರಿಲೀಸ್ ಮಾಡಲು ಸಜ್ಜಾಗಿರುವಂತೆಯೇ ಏರ್ ಟೆಲ್ ಕೂಡ ತಿರುಗೇಟು ನೀಡಲು ಸಜ್ಜಾಗಿದೆ.

ಕೇವಲ 2500 ರೂಪಾಯಿಗೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಏರ್ ಟೆಲ್ ಸಜ್ಜಾಗಿದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್ ಟೆಲ್ ಇಷ್ಟು ಕಡಿಮೆ ಬೆಲೆಗೆ 4 ಜಿ. ಸ್ಮಾರ್ಟ್ ಫೋನ್ ಬಿಡುಗಡೆಗೆ ತಯಾರಿ ನಡೆಸಿರುವುದು ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಭಾರೀ ಚರ್ಚೆಗೆ ಒಳಗಾಗಿದೆ.

ಈ ನಿಟ್ಟಿನಲ್ಲಿ ಏರ್ ಟೆಲ್, ಈಗಾಗಲೇ ಕೆಲವು ಹ್ಯಾಂಡ್ ಸೆಟ್ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ಅಂತಿಮ ಹಂತದಲ್ಲಿದೆ. ಪೈಪೋಟಿಯ ನಡುವೆಯೇ ಜಿಯೋ ಮತ್ತು ಏರ್ ಟೆಲ್ 500 ಮಿಲಿಯನ್ ಗ್ರಾಹಕರನ್ನು ತಲುಪಲು ಯೋಜನೆ ರೂಪಿಸಿವೆ.

ಇದರ ಭಾಗವಾಗಿ ಏರ್ ಟೆಲ್ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. ಇದು ಜನಪ್ರಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿರುತ್ತದೆ. ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ನಲ್ಲಿ ಲಭ್ಯವಿರುವ ಎಲ್ಲಾ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಲು ಬಳಕೆದಾರರಿಗೆ ಅವಕಾಶವಿರುತ್ತದೆ.

ಜಿಯೋ ಫೋನ್ ಮುಂಗಡ ಪ್ರಕ್ರಿಯೆ ಆಗಸ್ಟ್ 24 ರಿಂದ ಆರಂಭವಾಗಲಿದೆ. 1 ತಿಂಗಳ ಅವಧಿಯಲ್ಲೇ ಗ್ರಾಹಕರ ಕೈ ಸೇರಲಿದೆ. ಸೆಪ್ಟಂಬರ್ ಇಲ್ಲವೇ ಅಕ್ಟೋಬರ್ ನಲ್ಲಿ ಏರ್ ಟೆಲ್ 4 ಜಿ ಫೋನ್ ಅನ್ನು ಗ್ರಾಹಕರಿಗೆ ತಲುಪಿಸಲು ಪ್ಲಾನ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...