alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಖಾತೆಗೆ ಆಧಾರ್ ಲಿಂಕಿಂಗ್: ಸ್ಟೇಟಸ್ ಹೀಗೆ ಚೆಕ್ ಮಾಡಿ….

ಆಧಾರ್ ಕಾರ್ಡ್ ಈಗ ಪ್ರತಿಯೊಬ್ಬ ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇನ್ಷೂರೆನ್ಸ್ ಪಾಲಿಸಿ ಸೇರಿದಂತೆ ಸರ್ಕಾರದ ಬಹುತೇಕ ಎಲ್ಲಾ ಸೇವೆಗಳಿಗೂ ಆಧಾರ್ ಕಾರ್ಡ್ ಇರಲೇಬೇಕು. ಪಾನ್ ಕಾರ್ಡ್, ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ.

2017ರ ಡಿಸೆಂಬರ್ 31ರೊಳಗೆ ಪ್ರತಿಯೊಬ್ಬರೂ ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲೇಬೇಕಿದೆ. ಇದಕ್ಕಾಗಿ ಎಸ್ ಎಂ ಎಸ್, ಎಟಿಎಂ ಸೇರಿದಂತೆ ಹಲವು ವಿಧಾನಗಳಿವೆ. ಖುದ್ದು ನೀವು ಬ್ಯಾಂಕ್ ಗೆ ಭೇಟಿ ಕೊಟ್ಟು ಲಿಂಕ್ ಮಾಡಬಹುದಾಗಿದೆ.

ಈಗಾಗ್ಲೇ ಆಧಾರ್ ಜೊತೆಗೆ ಬ್ಯಾಂಕ್ ಖಾತೆ ಲಿಂಕ್ ಮಾಡಲು ಅರ್ಜಿ ಸಲ್ಲಿಸಿದವರು ಅದರ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಿ. ಇದಕ್ಕಾಗಿ ಮೊದಲು uidai.gov.in ಗೆ ವಿಸಿಟ್ ಮಾಡಿ. ಚೆಕ್ ಆಧಾರ್ & ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್ ಎಂಬ ಆಪ್ಷನ್ ಕ್ಲಿಕ್ ಮಾಡಿ.

ನಂತರ ನಿಮ್ಮ 12 ಡಿಜಿಟ್ ಆಧಾರ್ ಸಂಖ್ಯೆ ನಮೂದಿಸಿ, ಅಲ್ಲಿರುವ ಸೆಕ್ಯೂರಿಟಿ ಕೋಡ್ ಕೂಡ ಹಾಕಿ. ಸೆಂಡ್ ಓಟಿಪಿ ಎಂಬ ಆಪ್ಷನ್ ಕ್ಲಿಕ್ ಮಾಡಿ. ಆಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಬಟನ್ ಕ್ಲಿಕ್ ಮಾಡಿ.

ನಿಮ್ಮ ಆಧಾರ್ ನಂಬರ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಕಂಗ್ರಾಜ್ಯುಲೇಶನ್ಸ್ ಎಂಬ ಮೆಸೇಜ್ ಡಿಸ್ ಪ್ಲೇ ಆಗುತ್ತದೆ. ನಿಮ್ಮ ಬ್ಯಾಂಕ್ ಹೆಸರು, ಲಿಂಕ್ ಮಾಡಿದ ದಿನಾಂಕ ಹಾಗೂ ಸ್ಟೇಟಸ್ ಲಭ್ಯವಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...