alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಲಾಗುತ್ತಿದೆ 92,000 ಕೋಟಿ ರೂ. ಮೌಲ್ಯದ ಆಹಾರ ಧಾನ್ಯ

this-is-how-much-food-india-wastes-every-year-read-shocking-detailsಭಾರತದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದ್ರೂ ಬಡತನ ಮಾತ್ರ ನೀಗುತ್ತಿಲ್ಲ. ಇದಕ್ಕೆ ಕಾರಣ ಸಂಪನ್ಮೂಲಗಳ ಸದ್ಭಳಕೆಯಾಗದೇ ಇರುವುದು.

ಶಾಕಿಂಗ್ ನ್ಯೂಸ್ ಅಂದ್ರೆ ಸರ್ಕಾರವೇ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿವರ್ಷ 67 ಮಿಲಿಯನ್ ಟನ್ ಆಹಾರ ಧಾನ್ಯ ಪೋಲಾಗುತ್ತಿದೆ. ಇದು ಬ್ರಿಟನ್ ನಂತಹ ರಾಷ್ಟ್ರಗಳ ಉತ್ಪಾದನೆಗಿಂತಲೂ ಅಧಿಕ. ಭಾರತದಲ್ಲಿ ವ್ಯರ್ಥವಾಗುತ್ತಿರುವ ಆಹಾರ ಧಾನ್ಯ ಅತಿ ದೊಡ್ಡ ರಾಜ್ಯಕ್ಕೆ ವರ್ಷಪೂರ್ತಿ ಸಾಕಾಗುವಷ್ಟಿದೆ.

ನಮ್ಮ ದೇಶದಲ್ಲಿ ಪೋಲಾಗುತ್ತಿರುವ ಆಹಾರದ ಮೌಲ್ಯ 92,000 ಕೋಟಿ ರೂಪಾಯಿ. ಅಂದ್ರೆ 600 ಮಿಲಿಯನ್ ಬಡವರಿಗೆ ಸಬ್ಸಿಡಿ ದರದಲ್ಲಿ ಸರ್ಕಾರ ನೀಡುತ್ತಿರುವ ಪಡಿತರ ಧಾನ್ಯದ 2/3ರಷ್ಟು. ಅತಿ ಹೆಚ್ಚು ವ್ಯರ್ಥವಾಗುತ್ತಿರುವ ಪದಾರ್ಥಗಳೆಂದರೆ ಹಣ್ಣು, ತರಕಾರಿ ಮತ್ತು ದ್ವಿದಳ ಧಾನ್ಯಗಳು.

ಅವು ಬೇಗನೆ ಕೊಳೆತು ಹೋಗುತ್ತವೆ, ಕೀಟಗಳ ಹಾವಳಿ, ಹವಾಮಾನ ವೈಪರೀತ್ಯ ಮತ್ತು ಸಂಗ್ರಹ ವ್ಯವಸ್ಥೆಯಲ್ಲಿನ ದೋಷ ಇದಕ್ಕೆ ಕಾರಣ. ಜಮೀನಿನಿಂದ ಮಾರುಕಟ್ಟೆಗೆ ತರುವಷ್ಟರಲ್ಲಿ ಒಂದು ದಶಲಕ್ಷ ಟನ್ ಈರುಳ್ಳಿ ಹಾಳಾಗಿ ಹೋಗಿರುತ್ತದೆ. 2.2 ಮಿಲಿಯನ್ ಟನ್ ಟೊಮ್ಯಾಟೋ, 5 ಮಿಲಿಯನ್ ಮೊಟ್ಟೆಗಳು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿಲ್ಲದೆ ನಷ್ಟವಾಗುತ್ತಿವೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...