alex Certify ಬೆರಗಾಗಿಸುತ್ತೆ ಮುಕೇಶ್ ಅಂಬಾನಿ ಕಾರು ಚಾಲಕನ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮುಕೇಶ್ ಅಂಬಾನಿ ಕಾರು ಚಾಲಕನ ಸಂಬಳ

ರಿಲಯೆನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಷ್ಟೇ ಅಲ್ಲ ಜಗತ್ತಿನ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು.

ರಿಲಯೆನ್ಸ್ ಜಿಯೋ ಎಂಟ್ರಿ ನಂತರ ಮುಕೇಶ್ ಅಂಬಾನಿ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅವರ ಬಂಗಲೆ ಅತ್ಯಂತ ಐಷಾರಾಮಿ ಕಟ್ಟಡಗಳಲ್ಲೊಂದು. ಯಾವ ಅರಮನೆಗೂ ಅದು ಕಡಿಮೆಯಿಲ್ಲ. ಮುಕೇಶ್ ಅಂಬಾನಿ ಅವರ ಬಳಿ ಖಾಸಗಿ ಜೆಟ್‌, ಹೆಲಿಕಾಪ್ಟರ್ ಹಾಗೂ ನೂರಾರು ಕಾರುಗಳಿವೆ.

ಹಾಗಿದ್ರೆ ಅವರ ಕಾರು ಚಾಲಕರ ಸಂಬಳ ಎಷ್ಟಿರಬಹುದು ಅನ್ನೋ ಕುತೂಹಲ ಸಹಜ. ಆ ಮೊತ್ತ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಮೂಲಗಳ ಪ್ರಕಾರ ಮುಕೇಶ್ ಅಂಬಾನಿ ಅವರ ಕಾರು ಚಾಲಕನ ವೇತನವೇ ತಿಂಗಳಿಗೆ 2 ಲಕ್ಷ ರೂಪಾಯಿಗಳಿಗೂ ಅಧಿಕ. ಖಾಸಗಿ ಕಂಪನಿಯೊಂದು ನುರಿತ ಚಾಲಕರನ್ನು ನೇಮಿಸಿಕೊಡುವ ಜವಾಬ್ಧಾರಿ ಹೊತ್ತಿದೆ.

ಅಂಬಾನಿ ಕಾರು ಚಾಲಕರಾಗಿ ಕೆಲಸ ನಿರ್ವಹಿಸಲು ಅವರು ನೀಡೋ ಪರೀಕ್ಷೆಯನ್ನು ಪಾಸ್ ಮಾಡಬೇಕು. ವಿವಿಧ ಸನ್ನಿವೇಶಗಳಲ್ಲಿ ಚಾಲಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...