alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆಯಲ್ಲಿ ಬಯಲಾಯ್ತು ಮೊಬೈಲ್ ಸೇವಾ ಸಂಸ್ಥೆಗಳ ಬಣ್ಣ

Businesswoman Filling Survey Form On Mobile Phone

ನವದೆಹಲಿ: ರಿಲಯನ್ಸ್ ಜಿಯೋ ದೇಶದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಹಲವಾರು ಮೊಬೈಲ್ ಸೇವಾ ಸಂಸ್ಥೆಗಳು ದರ ಸಮರವನ್ನು ಆರಂಭಿಸಿವೆ.

ಇದೇ ಸಂದರ್ಭದಲ್ಲಿ ಬಹುತೇಕ ಕಂಪನಿಗಳ ಡೇಟಾ ಸೇವೆ ದುರ್ಬಲವಾಗಿದೆ. ಧ್ವನಿ ಸ್ಪಷ್ಟತೆಯೂ ಸರಿಯಾಗಿಲ್ಲ. ಕಾಲ್ ಡ್ರಾಪ್ ಸಮಸ್ಯೆಯೂ ಇದೆ ಎಂದು ಗ್ರಾಹಕರು ದೂರಿದ್ದಾರೆ. ಮೊಬೈಲ್ ಸೇವಾ ಸಂಸ್ಥೆಗಳ ದರ ಸಮರ ಕುರಿತಾಗಿ, ಲೋಕಲ್ ಸರ್ಕಲ್ಸ್ ಎಂಬ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಗ್ರಾಹಕರು, ಸೇವಾ ಸಂಸ್ಥೆಗಳು ಗುಣಮಟ್ಟದ ಸೇವೆ ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಮೊಬೈಲ್ ಸೇವಾ ಕಂಪನಿಗಳ ನಡುವಣ ದರ ಸಮರ ಒಳ್ಳೆಯ ಬೆಳವಣಿಗೆಯಾಗಿದ್ದು, ಲೋಪ ಸರಿಪಡಿಸಿ, ಗುಣಮಟ್ಟದ ಸೇವೆ ನೀಡಲು ಗಮನ ಹರಿಸಬೇಕೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...