alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟು ಮನೆಯಲ್ಲಿಟ್ಟವರಿಗೆ ಸಿಗುತ್ತಾ ಇನ್ನೊಂದು ಅವಕಾಶ?

notea_1499148537_618x347

ಹಳೆ ನೋಟುಗಳನ್ನು ಬ್ಯಾಂಕ್ ಗಳಿಗೆ ಜಮಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಪ್ರಶ್ನೆಯೊಂದನ್ನಿಟ್ಟಿದೆ. ಹಳೆ ನೋಟುಗಳ ಜಮೆ ಮಾಡಲು ಇನ್ನೊಂದು ಅವಕಾಶವನ್ನು ಸಾರ್ವಜನಿಕರಿಗೆ ಏಕೆ ನೀಡಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2 ವಾರಗಳ ಗಡುವು ನೀಡಿದೆ.

ಏಕಾಏಕಿ ನವೆಂಬರ್ 8,2016ರಂದು ಸಾವಿರ ಮುಖಬೆಲೆಯ ಹಾಗೂ 5 ನೂರು ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಹಳೆ ನೋಟುಗಳ ವಿನಿಮಯಕ್ಕೆ ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡತ್ತು. ಇದಾದ ನಂತ್ರ ಮಾರ್ಚ್ 30ರವರೆಗೆ ಆರ್ ಬಿಐನಲ್ಲಿ ಹಣ ಜಮೆ ಮಾಡಲು ಅವಕಾಶ ನೀಡಲಾಗಿತ್ತು. ಆದ್ರೆ ಹಣ ಜಮೆ ಮಾಡುವ ವೇಳೆ ಸಾರ್ವಜನಿಕರು ಕಾರಣ ಹೇಳಬೇಕಿತ್ತು. ಇನ್ನು ಅನಿವಾಸಿ ಭಾರತೀಯರಿಗೆ ಜುಲೈ 30ರವರೆಗೆ ಅವಕಾಶ ನೀಡಿದೆ.

ಆದ್ರೆ ಅನೇಕರು ಈವರೆಗೂ ಹಳೆ ನೋಟುಗಳನ್ನು ಕೋರ್ಟ್ ಗೆ ಜಮಾ ಮಾಡಿಲ್ಲ. ಹಣ ಜಮಾ ಮಾಡಲು ಇನ್ನೊಂದು ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯೊಂದು ಬಂದಿತ್ತು. ಇದ್ರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಯಾಕೆ ಇನ್ನೊಂದು ಅವಕಾಶ ನೀಡಿಲ್ಲ. ನೋಟು ಜಮಾ ಮಾಡಲು ಇನ್ನೊಂದು ಅವಕಾಶ ನೀಡಬಹುದಾ ಎನ್ನುವ ಬಗ್ಗೆ ಉತ್ತರ ನೀಡಿ ಎಂದು ಕೋರ್ಟ್ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...