alex Certify
ಕನ್ನಡ ದುನಿಯಾ       Mobile App
       

Kannada Duniya

GST ದರ ಕಡಿತದ ಅನುಕೂಲ ವರ್ಗಾಯಿಸದ ಪೂರೈಕೆದಾರನಿಗೆ ಬಿತ್ತು ದಂಡ

ಸರಕುಗಳ ಮಾರಾಟದ ವೇಳೆ ಜಿಎಸ್‌ಟಿ ದರ ಕಡಿತದ ಅನುಕೂಲಗಳನ್ನು ವರ್ಗಾಯಿಸದೇ ಇದ್ದುದಕ್ಕೆ ಪೂರೈಕೆದಾರರೇ ಹೊಣೆಗಾರರು ಎಂದು ಆದೇಶಿಸಿದ ರಾಷ್ಟ್ರೀಯ ಲಾಭಕೋರತನ ತಡೆ ಪ್ರಾಧಿಕಾರ (ಎನ್ಎಎ) ವ್ಯಾಪಾರಿಯೊಬ್ಬನಿಗೆ ದಂಡ ವಿಧಿಸಿದೆ.

ಜೈಪುರ ಮೂಲದ ಶರ್ಮಾ ಟ್ರೇಡಿಂಗ್ ಕಂಪನಿಯ ವಿರುದ್ಧದ ಪ್ರಕರಣದಲ್ಲಿ ಎನ್ಎಎ ಈ ತೀರ್ಪು ನೀಡಿದೆ. ಜಿಎಸ್‌ಟಿ ದರ ಕಡಿತಕ್ಕೆ ಅನುಗುಣವಾಗಿ ವ್ಯಾಸೆಲಿನ್‌ನ ನ ಬೆಲೆಯನ್ನು ಈ ಪೂರೈಕೆದಾರ ಸಂಸ್ಥೆ ಇಳಿಸಿರಲಿಲ್ಲ. ಇದು ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 171ರ ಪ್ರಕಾರ ಲಾಭಕೋರತನವಾಗುತ್ತದೆ ಎಂದು ಆರೋಪಿಸಲಾಗಿತ್ತು.

ಡಿಪಾರ್ಟ್‌ಮೆಂಟಲ್ ಸ್ಟೋರ್ ಒಂದು ಸಲ್ಲಿಸಿದ್ದ ದೂರನ್ನು ಲಾಭಕೋರತನ ತಡೆ ಸ್ಥಾಯಿ ಸಮಿತಿ ಪರೀಕ್ಷಿಸಿ ವಿಸ್ತೃತ ತನಿಖೆಗಾಗಿ ಲಾಭಕೋರತನ ತಡೆ ಡೈರೆಕ್ಟರೇಟ್ ಜನರಲ್‌ಗೆ (ಡಿಜಿಎಪಿ) ಶಿಫಾರಸು ಮಾಡಿತ್ತು.

ಜಿಎಸ್‌ಟಿ ದರವನ್ನು ಶೇ.28 ರಿಂದ ಶೇ.18 ಕ್ಕೆ ಇಳಿಸಿದ ಬಳಿಕ, 2017ರ ನ.15 ರಂದು ಪೂರೈಕೆದಾರ ಸಂಸ್ಥೆಯು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಅದರ ಅನುಕೂಲವನ್ನು ವರ್ಗಾಯಿಸಿರಲಿಲ್ಲ ಎಂಬುದನ್ನು ಡಿಜಿಎಪಿ ಪತ್ತೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...