alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಫ್ಟ್ ವೇರ್ ಇಂಜಿನಿಯರ್ ಬಾಳಲ್ಲಿ ಸಿಹಿಜೇನು

honey bee

ಚೆನ್ನೈ: ಆತ ಸಾಫ್ಟ್ ವೇರ್ ಇಂಜಿನಿಯರ್. ಪ್ರತಿದಿನ ಯಂತ್ರದ ರೀತಿ ದುಡಿದು ದುಡಿದೂ ಸಾಕಾಗಿ ಹೋಗಿತ್ತು. ಕೆಲಸವೇ ಬೇಡವೆನಿಸಿದಾಗ ಬಿಟ್ಟುಬಂದ ಅವರಿಗೆ ಮನೆಯವರು ಬೇರೆ ಕೆಲಸ ಕೊಡಿಸುತ್ತೇವೆ ಎಂದರೂ ಮನಸ್ಸು ಒಪ್ಪಲಿಲ್ಲ.

ತಮಿಳುನಾಡಿನ ಕರೂರು ಜಿಲ್ಲೆಯ ಹಳ್ಳಿಯೊಂದರ ಯುವಕನ ಹೆಸರು ಕೃಷ್ಣಮೂರ್ತಿ. ರೈತ ಕುಟುಂಬದಿಂದ ಬಂದ ಸುಮಾರು 30 ವರ್ಷ ವಯಸ್ಸಿನ ಇವರು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಕೈತುಂಬಾ ಸಂಬಳ. ಆದರೂ ಕೆಲಸ ಮಾಡಲು ಸ್ವಲ್ಪವೂ ಇಷ್ಟವಿರಲಿಲ್ಲ. ಯಾಂತ್ರೀಕೃತ ಬದುಕಿನಿಂದ ಸಾಕಾಗಿ ಹೋಗಿದ್ದ ಕೃಷ್ಣಮೂರ್ತಿ ಕೆಲಸ ಬಿಟ್ಟು ಬರುತ್ತೇನೆಂದು ಹೇಳಿದಾಗ ಮನೆಯವರು ಒಪ್ಪಲಿಲ್ಲ. ಈ ಹಿಂದೆ ಆರ್ಥಿಕ ಹಿಂಜರಿತದಿಂದ ಸಾಫ್ಟ್ ವೇರ್ ಇಂಜಿನಿಯರ್ ಗಳು ಕೆಲಸ ಕಳೆದುಕೊಳ್ಳಬೇಕಾಯಿತು. ಕೃಷ್ಣಮೂರ್ತಿಯ ಕೆಲಸ ಹೋಗದಿದ್ದರೂ ಆವರೇ ಮನೆಯವರಿಗೆ ಸುಳ್ಳು ಹೇಳಿ ಕೆಲಸ ಬಿಟ್ಟು ಬಂದಿದ್ದರು.

ಅವರ ತಂದೆ ಕರೂರು ವೈಶ್ಯ ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದರೂ ಸೇರಲು ಮನಸ್ಸು ಒಪ್ಪಲಿಲ್ಲ. ಶೇರ್ ಮಾರ್ಕೆಟಿಂಗ್ ನಲ್ಲಿ ಒಂದಿಷ್ಟು ಹಣ ಕಳೆದುಕೊಂಡ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾದ ಕೃಷ್ಣಮೂರ್ತಿ, ಜೇನು ಸಾಕಾಣಿಕೆಯನ್ನು ಆರಂಭಿಸಿದರು. ಅದನ್ನು ಯಶಸ್ವಿ ಉದ್ಯಮವಾಗಿಸುವಲ್ಲಿ ಶ್ರಮಿಸಿದರು. ಇದರ ಪರಿಣಾಮ ಪ್ರತಿ ತಿಂಗಳು 500 ಕೆ.ಜಿ. ಶುದ್ದ ಜೇನುತುಪ್ಪ ಉತ್ಪಾದನೆಯಾಗುತ್ತಿದೆ. ಒಂದು ಕೆ.ಜಿ.ಗೆ 716 ರೂ. ದರ ಸಿಗುತ್ತಿದೆ. ಆನ್ ಲೈನ್ ಮಾರಾಟ ಕೂಡ ಮಾಡುತ್ತಿದ್ದು, ಸುಮಾರು 800 ಗ್ರಾಹಕರು ಆನ್ ಲೈನ್ ನಲ್ಲಿ ಖರೀದಿಸುತ್ತಾರೆ. ಇದೀಗ ಕೃಷ್ಣಮೂರ್ತಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಬಾಳು ಸಿಹಿಜೇನಿನಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...