alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು ಆಧಾರ್ ಜೊತೆ ಲಿಂಕ್ ಮಾಡಿ ಮೊಬೈಲ್ ನಂಬರ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಅನಿವಾರ್ಯವಾಗಿದೆ. ಮೊಬೈಲ್ ನಂಬರ್ ಲಿಂಕ್ ಮಾಡಲು ಇನ್ಮುಂದೆ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಾಗಿಲ್ಲ. ಡಿಸೆಂಬರ್ 1ರ ನಂತ್ರ ಮನೆಯಲ್ಲಿಯೇ ಆನ್ಲೈನ್ ಮೂಲಕ ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಯುಐಡಿಎಐ ಮತ್ತು ಟೆಲಿಕಾಂ ಕಂಪನಿಗಳ ನಡುವೆ ನಡೆದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ಗ್ರಾಹಕರು ಟೆಲಿಕಾಂ ಕಂಪನಿಗಳ ಸೆಂಟರ್ ಗೆ ಹೋಗಿ ಮೊಬೈಲ್ ನಂಬರನ್ನು ಆಧಾರ್ ಜೊತೆ ಲಿಂಕ್ ಮಾಡ್ತಿದ್ದಾರೆ. ಇದ್ರಿಂದಾಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಫೆಬ್ರವರಿ 6,2018 ರೊಳಗೆ ಎಲ್ಲ ಗ್ರಾಹಕರು ತಮ್ಮ ಮೊಬೈಲ್ ನಂಬರನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು. ಗಡುವು ಹತ್ತಿರ ಬರ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ಟೆಲಿಕಾಂ ಕಂಪನಿಗಳಿಗೆ ಆನ್ಲೈನ್ ಲಿಂಕ್ ಗೆ ಅವಕಾಶ ನೀಡುವಂತೆ ಸೂಚನೆ ನೀಡಿತ್ತು. ಈ ಸಂಬಂಧ ಶುಕ್ರವಾರ ಸಭೆ ನಡೆದಿತ್ತು. ಸಭೆಯಲ್ಲಿ ಸಿದ್ಧತೆಗೆ ನವೆಂಬರ್ 30ರವರೆಗೆ ಅವಕಾಶ ಕೇಳಿದ ಟೆಲಿಕಾಂ ಕಂಪನಿಗಳು ಡಿಸೆಂಬರ್ 1ರಿಂದ ಆನ್ಲೈನ್ ಲಿಂಕ್ ಗೆ ಅವಕಾಶ ಮಾಡಿಕೊಡುವುದಾಗಿ ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...