alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿನಿತ್ಯ ನರಕಯಾತನೆ ಅನುಭವಿಸ್ತಿದ್ದಾರೆ BPO ಉದ್ಯೋಗಿಗಳು

ಪ್ರತಿ ಬಾರಿ ಗ್ರಾಹಕರಿಂದ ಕರೆ ಬಂದಾಗ್ಲೂ ಮಾತನಾಡಿ ಫೋನ್ ಕೆಳಗಿಟ್ಟು ಸ್ನಾನದ ಕೋಣೆಗೆ ಹೋಗಿ ಕಣ್ಣೀರು ಹಾಕ್ತಾಳೆ ಹೈದ್ರಾಬಾದ್ ನ ಈ ಮಹಿಳೆ. ಕಣ್ಣು ಒರೆಸಿಕೊಂಡು ಮತ್ತೆ ತನ್ನ ಸ್ಥಾನಕ್ಕೆ ಮರಳಿ ಫೋನ್ ಕೈಗೆತ್ತಿಕೊಳ್ತಾಳೆ, ನಕಲಿ ಅಮೆರಿಕನ್ ಐಡಿಯನ್ನು ಧರಿಸ್ತಾಳೆ.

ವಿದೇಶದ ಬಿಪಿಓಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಭಾರತೀಯರ ದುಃಸ್ಥಿತಿ. ಜನಾಂಗೀಯ ನಿಂದನೆಯಿಂದ ನೊಂದಿದ್ದಾರೆ ಭಾರತೀಯ ಉದ್ಯೋಗಿಗಳು. ವಿದೇಶಿ ಕ್ಲೈಂಟ್ ಗಳು ತೀರಾ ಕಪಟ ಸ್ವಭಾವ ಹೊಂದಿದ್ದು, ಭಾರತೀಯರು ತಮ್ಮ ಉದ್ಯೋಗ ಕಿತ್ತುಕೊಳ್ಳುವ ಕಳ್ಳರು ಎಂಬ ಭಾವನೆಯಿಂದ ನೋಡ್ತಿದ್ದಾರೆ.

ಇತ್ತೀಚೆಗಷ್ಟೆ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಇದು ಬಹಿರಂಗವಾಗಿದೆ. 3.3 ಲಕ್ಷ ಭಾರತೀಯರು ಬಿಪಿಓಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ವಿದೇಶಿ ಗ್ರಾಹಕರ ಬೈಗುಳ ತಿನ್ನುತ್ತಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ನಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿ ಈ ವರದಿ ತಯಾರಿಸಲಾಗಿದೆ.

ಜನಾಂಗೀಯ ನಿಂದನೆ ಜೊತೆಜೊತೆಗೆ ರಿಸೆಶನ್, ಉದ್ಯೋಗದಿಂದ ವಜಾ ಹೀಗೆ ಹತ್ತಾರು ಸಮಸ್ಯೆಗಳನ್ನು ಭಾರತೀಯರು ಎದುರಿಸುತ್ತಿದ್ದಾರೆ. ವಿದೇಶೀಯರಿಗೆ ಭಾರತೀಯರ ಐಡೆಂಟಿಟಿಯನ್ನು ಅರ್ಥ ಮಾಡಿಸುವುದು ತುಂಬಾನೇ ಕಷ್ಟ ಎನ್ನುತ್ತಾರೆ ನೊಂದ ಉದ್ಯೋಗಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...