alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆ ನಂತ್ರ ಚೇತರಿಕೆ ಕಂಡ ಷೇರು ಮಾರುಕಟ್ಟೆ: 400 ಅಂಕ ಏರಿದ ಸೆನ್ಸೆಕ್ಸ್

ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಮಂಗಳವಾರ ವಹಿವಾಟು ಶುರುವಾಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ನೀರಸ ಪ್ರದರ್ಶನ ಕಂಡುಬಂತು. ಷೇರುಗಳಲ್ಲಿ ಇಳಿಕೆ ಕಂಡು ಬಂತು.

ಚೀನಾ ಹಾಗೂ ಅಮೆರಿಕಾ ಮಧ್ಯೆ ನಡೆಯುತ್ತಿರುವ ಟ್ರೇಡ್ ವಾರ್ ಹಾಗೂ ತೈಲ ಬೆಲೆ ಏರಿಕೆ ಇದಕ್ಕೆ ಮುಖ್ಯ ಕಾರಣವಾಗಿತ್ತು. ಆದ್ರೆ ಒಂದು ಗಂಟೆ ನಂತ್ರ ಷೇರು ಮಾರುಕಟ್ಟೆಯಲ್ಲಿ ಸುಧಾರಣೆ ಕಂಡು ಬಂದಿದೆ.

ಆರಂಭದಲ್ಲಿ ಸೆನ್ಸೆಕ್ಸ್ 200 ಅಂಕ ಕುಸಿತ ಕಂಡಿತ್ತು. ಒಂದು ಗಂಟೆ ನಂತ್ರ 400 ಅಂಕ ಏರಿಕೆ ಕಂಡಿದೆ. ಇನ್ನು ನಿಫ್ಟಿ 11000 ಅಂಕ ಏರಿಕೆ ಕಂಡಿದ್ದು, ಷೇರುದಾರರ ಮುಖದಲ್ಲಿ ನಗು ಮೂಡಿಸಿದೆ. ಸದ್ಯ ಸೆನ್ಸೆಕ್ಸ್ 243.89 ಅಂಕ ಅಂದ್ರೆ ಶೇಕಡಾ 0.67 ರಷ್ಟು ಏರಿಕೆ ಕಂಡು 36548 ಅಂಕಗಳ ವಹಿವಾಟು ನಡೆಸುತ್ತಿದೆ. ನಿಫ್ಟಿ 68.55 ಅಂಕ ಅಂದ್ರೆ ಶೇಕಡಾ 0.63 ಏರಿಕೆ ಕಂಡು 11,035.95 ನಲ್ಲಿ ವಹಿವಾಟು ನಡೆಸುತ್ತಿದೆ.

ಕಳೆದ ಐದು ವಹಿವಾಟಿನ ಅವಧಿಯಲ್ಲಿ ಹೂಡಿಕೆದಾರರಿಗೆ ಒಟ್ಟು 8.47 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದ ವಾರದಿಂದ ಈವರೆಗೆ ಸೆನ್ಸೆಕ್ಸ್ ಶೇಕಡಾ 5ರಷ್ಟು ಇಳಿಕೆ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...