alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿಗಿದೆ ವಿಜಯ್ ಮಲ್ಯರ ಐಷಾರಾಮಿ ವಿಮಾನ

malya

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ಮಿಜಯ್ ಮಲ್ಯರಿಂದ ಹಣ ವಸೂಲಿ ಮಾಡಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಿದ್ದಾರೆ. ಮಲ್ಯ ಸೇವಾ ತೆರಿಗೆ ಇಲಾಖೆಯಲ್ಲೂ 535 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ.

ಹಾಗಾಗಿ ಅವರ ವಿಮಾನವನ್ನೇ ಸೇವಾ ತೆರಿಗೆ ಇಲಾಖೆ ಹರಾಜಿಗಿಟ್ಟಿದೆ. ಇವತ್ತು ಮತ್ತು ನಾಳೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇಲಾಖೆ ಮೊದಲು ಹರಾಜು ಮೊತ್ತವನ್ನು 152 ಕೋಟಿ ರೂಪಾಯಿಗೆ ನಿಗದಿಪಡಿಸಿತ್ತು, ಆದ್ರೆ ಯಾರೂ ವಿಮಾನ ಖರೀದಿಸಲು ಮುಂದಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಬೆಲೆಯಲ್ಲಿ ಇಳಿಕೆ ಮಾಡಿದೆ.

ಮೂರನೇ ಬಾರಿಗೆ ಮಲ್ಯ ವಿಮಾನದ e-auction ಪ್ರಕ್ರಿಯೆ ನಡೆಯುತ್ತಿದ್ದು, ಈ ಹಿಂದೆ ಎರಡು ಬಾರಿ ಕೂಡ ಯಾರೂ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿರಲಿಲ್ಲ. ಆಗಸ್ಟ್ ನಲ್ಲಿ ನಡೆದ ಪ್ರಕ್ರಿಯೆಯಲ್ಲಿ ಎಸ್ ಜಿ ಐ ಕೊಮೆಕ್ಸ್ ಕೇವಲ 27 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ಜೂನ್ ನಲ್ಲಿ ನಡೆದ ಮೊದಲ ಹರಾಜು ಪ್ರಕ್ರಿಯೆಯಲ್ಲಿ ದುಬೈ ಮೂಲದ ಕಂಪನಿ ಕೇವಲ 1.09 ಕೋಟಿ ರೂಪಾಯಿಗೆ ವಿಮಾನ ಖರೀದಿಸುವುದಾಗಿ ಹೇಳಿತ್ತು. ನಿರೀಕ್ಷಿತ ಬೆಲೆ ಬಾರದ ಹಿನ್ನೆಲೆಯಲ್ಲಿ ಈ ಬಾರಿ ಸೇವಾ ತೆರಿಗೆ ಇಲಾಖೆ ಹರಾಜು ಪ್ರಕ್ರಿಯೆ ಬಗ್ಗೆ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಕೂಡ ಜಾಹೀರಾತು ನೀಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...