alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಬಿ ಐ ಗೆ ಒಂದು ಸಂದೇಶ ಕಳುಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿ ಐ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಬ್ಯಾಂಕಿನ ವಹಿವಾಟನ್ನು ಸುಲಭಗೊಳಿಸಲು ಅನೇಕ ಆ್ಯಪ್ ಗಳನ್ನು ಬ್ಯಾಂಕ್ ಶುರುಮಾಡಿದೆ.

ಇಷ್ಟರ ಮಧ್ಯೆಯೂ ಬ್ಯಾಂಕ್ ಗ್ರಾಹಕರು ಅನೇಕ ಸಮಸ್ಯೆ, ಕಿರಿಕಿರಿ ಅನುಭವಿಸುತ್ತಾರೆ. ಸಮಸ್ಯೆ ಹೊತ್ತು ಬ್ಯಾಂಕ್ ಗೆ ಹೋದ್ರೆ ಕೆಲವೊಮ್ಮೆ ಅಧಿಕಾರಿಗಳಿಂದ ಸರಿಯಾದ ಪರಿಹಾರ ಸಿಗುವುದಿಲ್ಲ. ಇನ್ಮುಂದೆ ಸಮಸ್ಯೆ ಹೇಗೆ ಪರಿಹರಿಸಿಕೊಳ್ಳೋದು ಎಂಬ ಚಿಂತೆಗೆ ಬಿದ್ದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗಿಲ್ಲ. ಒಂದೇ ಒಂದು ಎಸ್ ಎಂ ಎಸ್ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಎಸ್ ಬಿ ಐ ಹೊಸದಾಗಿ ಈ ಎಸ್ ಎಂ ಎಸ್ ಸೇವೆ ಶುರು ಮಾಡಿದೆ. ಬ್ಯಾಂಕಿನ ಯೋಜನೆ ನಿಮಗೆ ಇಷ್ಟವಾಗದಿದ್ದಲ್ಲಿ ಇಲ್ಲವೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಅನ್ ಹ್ಯಾಪಿ ಎಂದು ಟೈಪ್ ಮಾಡಿ 8008202020 ನಂಬರ್ ಗೆ ಕಳುಹಿಸಬೇಕು. ಇದು ಕಸ್ಟಮರ್ ಸೇವೆ ಪಡೆಯಲು ಫೋನ್ ನಲ್ಲಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸುತ್ತದೆ. ಆದಷ್ಟು ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ನೆರವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.

ಇಷ್ಟೇ ಅಲ್ಲ ಬ್ಯಾಂಕ್ ನೋ ಯು ಆ್ಯಪ್ ಶುರು ಮಾಡಿದೆ. ಇದ್ರಲ್ಲಿ ನಿಮ್ಮ ಸಮೀಪದ ಎಸ್ ಬಿ ಐ ಬ್ಯಾಂಕ್ ಶಾಖೆಯ ಕೂಪನ್ ಪಡೆಯಬಹುದಾಗಿದೆ. ಬ್ಯಾಂಕ್ ಗೆ ಹೋಗಿ ಕೂಪನ್ ಪಡೆದು ನಿಮ್ಮ ಸರತಿ ಬರುವವರೆಗೆ ಕಾಯುವ ಬದಲು ಈ ಅಪ್ಲಿಕೇಷನ್ ಮೂಲಕ ಮೊದಲೇ ಕೂಪನ್ ಪಡೆದಿದ್ದರೆ ಆರಾಮವಾಗಿ ಬ್ಯಾಂಕ್ ಕೆಲಸ ಮುಗಿಸಿ ಬರಬಹುದು. ಒಂದು ವೇಳೆ ಕೂಪನ್ ಪಡೆದ ದಿನ ಬ್ಯಾಂಕ್ ಗೆ ಹೋಗಲು ಸಾಧ್ಯವಾಗದೆ ಹೋದಲ್ಲಿ ಅದನ್ನು ರದ್ದು ಮಾಡುವ ವ್ಯವಸ್ಥೆಯೂ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...