alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ನ ಈವರೆಗಿನ ಅತ್ಯಂತ ದುಬಾರಿ ಫೋನ್ `ಗ್ಯಾಲಕ್ಸಿ ನೋಟ್ 8′

samsung-galaxy-s8-display

‘ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8’ ಕಂಪನಿಯ ಅತ್ಯಂತ ದುಬಾರಿ ಫೋನ್ ಎನ್ನಲಾಗ್ತಾ ಇದೆ. ಮೂಲಗಳ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬೆಲೆ 72,123 ರೂಪಾಯಿ ನಿಗದಿಪಡಿಸಲಾಗಿದೆಯಂತೆ. ಸೆಪ್ಟೆಂಬರ್ ನಲ್ಲಿ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಗ್ಯಾಲಕ್ಸಿ ನೋಟ್ 8 ಉಳಿದ ಫೋನ್ ಗಿಂತ ಸಾಕಷ್ಟು ವಿಶಿಷ್ಟತೆಗಳನ್ನು ಹೊಂದಿದೆ ಎನ್ನಲಾಗ್ತಾ ಇದೆ. ಈ ಹಿಂದೆ ಕಂಪನಿ ಸ್ಯಾಮ್ಸಂಗ್ ಎಸ್ 8 ಮತ್ತು ಎಸ್ 8 ಪ್ಲಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಟ್ಟಿತ್ತು. ಸ್ಯಾಮ್ಸಂಗ್ ಎಸ್ 8 ಬೆಲೆ 57,990 ರೂಪಾಯಿ ಇದ್ರೆ ಎಸ್ 8 ಪ್ಲಸ್ ಬೆಲೆ 64,990 ರೂಪಾಯಿ ನಿಗದಿಪಡಿಸಲಾಗಿತ್ತು.

ನೋಟ್ 8 ಸ್ಮಾರ್ಟ್ ಫೋನ್ ನಲ್ಲಿ 12 ಮೆಗಾಫಿಕ್ಸಲ್ ಡ್ಯುಯಲ್ ಕ್ಯಾಮರಾ ಇದೆ ಎನ್ನಲಾಗ್ತಾ ಇದೆ. 64 ಜಿಬಿ ರ್ಯಾಮ್ ಇರಲಿದೆ. ಈ ಸ್ಮಾರ್ಟ್ಫೋನ್ ನಲ್ಲಿ 3,330 mAh ಬ್ಯಾಟರಿ ಕೂಡ ಇದೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಆಗಸ್ಟ್ ನಲ್ಲಿ ಗ್ಯಾಲಕ್ಸಿ ನೋಟ್ 8 ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿತ್ತು. ಆದ್ರೀಗ ಆಪಲ್ ಐಫೋನ್ 8 ಬಿಡುಗಡೆಯಾದ ನಂತ್ರ ಸೆಪ್ಟೆಂಬರ್ ನಲ್ಲಿ ಗ್ಯಾಲಕ್ಸಿ ನೋಟ್ 8 ಬಿಡುಗಡೆ ಮಾಡುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...